23/12/2024

Law Guide Kannada

Online Guide

Governor seals Civil Courts Amendment Act: Effective immediately: What are the changes?

ಸಿವಿಲ್ ನ್ಯಾಯಾಲಯಗಳ ತಿದ್ದುಪಡಿ ಕಾಯ್ದೆಗೆ ರಾಜ್ಯಪಾಲರಿಂದ ಬಿತ್ತು ಮುದ್ರೆ: ತಕ್ಷಣದಿಂದಲೇ ಜಾರಿ: ಆದ ಬದಲಾವಣೆಗಳೇನು?
ಬೆಂಗಳೂರು,ಜೂನ್,21,2024 (www.justkannada.in): ತಳಹ0ತದ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದ ವಿತ್ತೀಯ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸಲು ಹಾಗೂ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಅಧಿಕ ಪ್ರಕರಣಗಳ ಹೊರೆಯನ್ನು ತಗ್ಗಿಸುವ ಸಲುವಾಗಿ ಸದನದಲ್ಲಿ ಮಂಡಿಸಿ ಅಂಗೀಕರಿಸಲಾಗಿದ್ದ ಕರ್ನಾಟಕ ಸಿವಿಲ್ ನ್ಯಾಯಾಲಯಗಳ (ತಿದ್ದುಪಡಿ) ವಿಧೇಯಕ 2023ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು ತಕ್ಷಣದಿಂದ ತಿದ್ದುಪಡಿಯ ನಿಯಮಗಳು ಜಾರಿಗೆ ಬರಲಿವೆ

ಕರ್ನಾಟಕ ಸಿವಿಲ್ ನ್ಯಾಯಾಲಯಗಳ ಅಧಿನಿಯಮ 1964 ಕ್ಕೆ ತಿದ್ದುಪಡಿ ತರಲು ದಿನಾ0ಕ 12.12.2023 ರಂದು ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ಕರ್ನಾಟಕ ಸಿವಿಲ್ ನ್ಯಾಯಾಲಯಗಳ (ತಿದ್ದುಪಡಿ) ವಿಧೇಯಕ 2023 ನ್ನು ಮಂಡಿಸಿ ಅಂಗೀಕರಿಸಲಾಗಿತ್ತು. ಈ ತಿದ್ದುಪಡಿಗೆ ರಾಜ್ಯಪಾಲರು ದಿನಾ0ಕ 20.3.2024ರ0ದು ಅನುಮತಿ ನೀಡಿದ್ದು, ಈ ಸಂಬಂಧ ದಿನಾ0ಕ 19.6 2024ರ ರಾಜ್ಯ ಪತ್ರದಲ್ಲಿ ಈ ತಿದ್ದುಪಡಿ ಪ್ರಕಟವಾಗಿದ್ದು ನಿಯಮಗಳು ತಕ್ಷಣದಿ0ದ ಜಾರಿಗೆ ಬರಲಿವೆ ಎಂದು ತಿಳಿಸಲಾಗಿದೆ.

ತಿದ್ದುಪಡಿಯಿಂದ ಅಧಿಕಾರ ವ್ಯಾಪ್ತಿಯಲ್ಲಿ ಆದ ಬದಲಾವಣೆಗಳು ಹೀಗಿದೆ ನೋಡಿ..

ಮೊದಲನೇ ತಿದ್ದುಪಡಿ
ವಿತ್ತೀಯ ಅಧಿಕಾರ ವ್ಯಾಪ್ತಿಯ ಕುರಿತು ಕರ್ನಾಟಕ ಸಿವಿಲ್ ನ್ಯಾಯಾಲಯಗಳ ಕಾಯ್ದೆ 1964ರ ಪ್ರಕರಣ 17ರ ಪ್ರಕಾರ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯಕ್ಕೆ 5 ಲಕ್ಷಗಳಿಗೆ ಮೀರದ ವಿಷಯ ಮೊಬಲಗು ಅಥವಾ ಎಲ್ಲಾ ಮೂಲದಾವೆಗಳಿಗೆ ಹಾಗೂ ವ್ಯವಹರಣೆಗಳಿಗೆ ಅಧಿಕಾರ ವ್ಯಾಪ್ತಿ ಪ್ರಾಪ್ತವಾಗಿತ್ತು. ಪ್ರಸ್ತುತ ತಿದ್ದುಪಡಿಯ ಮೂಲಕ 5 ಲಕ್ಷಗಳಿಗೆ ಬದಲಾಗಿ 15 ಲಕ್ಷಗಳಿಗೆ ಸಿವಿಲ್ ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ. ದಿನಾ0ಕ 19.6.2024 ರಿ0ದ 15 ಲಕ್ಷದೊಳಗಿನ ಮೌಲ್ಯದ ದಾವೆಗಳನ್ನು ತಳಹ0ತದ ಸಿವಿಲ್ ನ್ಯಾಯಾಲಯದಲ್ಲಿ (ಹಿಂದಿನ ಹೆಸರು. ಮುನ್ನೀಫ್ ನ್ಯಾಯಾಲಯ) ದಾಖಲಿಸತಕ್ಕದ್ದಾಗಿದೆ.

2ನೇ ತಿದ್ದುಪಡಿ
ಮೇಲ್ಮನವಿಗೆ ಸಂ0ಬ0ಧಪಟ್ಟಂತೆ ಕರ್ನಾಟಕ ಸಿವಿಲ್ ನ್ಯಾಯಾಲಯಗಳ ಕಾಯ್ದೆ 1964ರ ಪ್ರಕರಣ 19ರ ಪ್ರಕಾರ ಹಿರಿಯ ಸಿವಿಲ್ ನ್ಯಾಯಾಧೀಶರು ಮಾಡಿದ ಡಿಕ್ರಿಗಳು ಮತ್ತು ಆದೇಶಕ್ಕೆ ಸ0ಬಂಧಿಸಿದ0ತೆ ಮೂಲದಾವೆ ಅಥವಾ ವ್ಯವಹರಣೆಯ ವಸ್ತು, ವಿಷಯದ ಮೊಬಲಗು 10 ಲಕ್ಷ ಗಳಿಗಿ0ತ ಕಡಿಮೆ ಇದ್ದಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬೇಕಾಗಿತ್ತು. 10 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯವುಳ್ಳ ದಾವೆಗೆ ಸಂಬ0ಧಪಟ್ಟಂತೆ ಮೇಲ್ಮನವಿಯನ್ನು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿತ್ತು. ಪ್ರಸ್ತುತ ತಿದ್ದುಪಡಿಯು ಹಿರಿಯ ಸಿವಿಲ್ ನ್ಯಾಯಾಧೀಶರು ಹೊರಡಿಸಿದ ಡಿಕ್ರಿಗಳು ಮತ್ತು ಆದೇಶಗಳ ವಿರುದ್ಧ ಕಾನೂನಿನ ಮೂಲಕ ಮೇಲ್ಮನವಿಗೆ ಅವಕಾಶವಿದ್ದಲ್ಲಿ ಅಂಥ ಮೇಲ್ಮನವಿಗಳನ್ನು ಜಿಲ್ಲಾ ನ್ಯಾಯಾಲಯದಲ್ಲಿ ಮಾತ್ರ ಸಲ್ಲಿಸತಕ್ಕದ್ದಾಗಿದೆ. ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸುವಂತಿಲ್ಲ.

ತಿದ್ದುಪಡಿಯ ಪರಿಣಾಮಗಳು
ತಿದ್ದುಪಡಿಯಿ0ದ ತಳಹ0ತದ ಸಿವಿಲ್ ನ್ಯಾಯಾಲಯ ಹಾಗೂ ಜಿಲ್ಲಾ ನ್ಯಾಯಾಲಯಗಳ ಕೆಲಸದ ಹೊರೆ ಹೆಚ್ಚಾಗಲಿದೆ. 15 ಲಕ್ಷಕ್ಕಿಂತಲೂ ಹೆಚ್ಚಿನ ಅನಿಯಮಿತ ಮೌಲ್ಯದ ದಾವೆಗಳನ್ನು ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾಖಲಿಸತಕ್ಕದ್ದಾಗಿದೆ. ಸಿವಿಲ್ ನ್ಯಾಯಾಲಯಗಳ ಡಿಕ್ರಿ ಅಥವಾ ಆದೇಶದ ವಿರುದ್ಧ ಹಿರಿಯ ಸಿವಿಲ್ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಈ ಹಿಂದಿನಂತೆ ಸಲ್ಲಿಸತಕ್ಕದ್ದಾಗಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.