23/12/2024

Law Guide Kannada

Online Guide

The Supreme Court has expressed displeasure that if the trial of cases is delayed without any reason

ಕೇಸ್ ಗಳ ವಿಲೇವಾರಿ ವಿಳಂಬಕ್ಕೆ ನ್ಯಾಯಾಲಯದ ಮೇಲೆ ಅನಗತ್ಯ ಧೂಷಣೆ- ಬೇಸರ ಹೊರಹಾಕಿದ ಸುಪ್ರೀಂಕೋರ್ಟ್.

ನವದೆಹಲಿ: ಕ್ಷಿಪ್ರ ನ್ಯಾಯಧಾನದಲ್ಲಿ ವಿಳಂಬವಾಗುತ್ತಿದ್ದು ವಕೀಲರಿಂದಲೇ ಪ್ರಕರಣಗಳ ಇತ್ಯರ್ಥಕ್ಕೆ ಅಡ್ಡಿಯಾಗುತ್ತಿದೆ. ವಿನಾ ಕಾರಣದಿ0ದ ಪ್ರಕರಣಗಳ ವಿಚಾರಣೆ ವಿಳಂಬವಾದರೆ ನ್ಯಾಯಾಲಯಗಳನ್ನ ಅನಗತ್ಯವಾಗಿ ಧೂಷಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ಹೊರಹಾಕಿದೆ.

ನ್ಯಾ.ಪಿ.ವಿ.ಸ0ಜಯ್ ಕುಮಾರ್ ಮತ್ತು ನ್ಯಾ. ಪ್ರಸನ್ನ ಬಿ. ವರಾಳೆ ಅವರಿದ್ದ ಸುಪ್ರೀಂ ಕೋರ್ಟ್ನ ನ್ಯಾಯಪೀಠ ಈ ರೀತಿ ಬೇಸರ ವ್ಯಕ್ತಪಡಿಸಿದೆ. ಪ್ರಕರಣದ ಶೀಘ್ರ ವಿಲೇವಾರಿಯಲ್ಲಿ ವಕೀಲರು ಮತ್ತು ದಾವೆದಾರರ ಸಹಕಾರ ಅಗತ್ಯ. ಅವರು ವಿನಾ ಕಾರಣದಿ0ದ ಪ್ರಕರಣಗಳ ವಿಚಾರಣೆ ವಿಳಂಬ ಮಾಡಿದರೂ ನ್ಯಾಯಾಲಯಗಳ ಮೇಲೆ ಆರೋಪ ಮಾಡಲಾಗುತ್ತದೆ ಎ0ದು ಸುಪ್ರೀಂ ಕೋರ್ಟ್ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಕರಣದಲ್ಲಿ ವಾದ ಮಂಡಿಸುತ್ತಿದ್ದ ವಕೀಲರು ಅಸ್ಪಸ್ಥರಾಗಿದ್ದರು. ಹಾಗಾಗಿ 2017ರಲ್ಲಿ ಸಲ್ಲಿಸಲಾಗಿದ್ದ ಸಿವಿಲ್ ಮೇಲ್ಮನವಿಯನ್ನು ಮು0ದೂಡುವಂತೆ ಪ್ರಾಕ್ಸಿ ವಕೀಲರು ಕೋರಿದ್ದರು. ಈ ಸ0ದರ್ಭದಲ್ಲಿ ರಜಾಕಾಲೀನ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.