Dismissal of suit for joint ownership of several persons if all are not made defendants-Supreme Court
ಬಹುವ್ಯಕ್ತಿಗಳ ಜಂಟಿ ಒಡೆತನದ ದಾವೆಗೆ ಎಲ್ಲರನ್ನೂ ಪ್ರತಿವಾದಿಗಳನ್ನಾಗಿ ಮಾಡದಿದ್ರೆ ಮೊಕದ್ದಮೆ ವಜಾ-ಸುಪ್ರೀಂಕೋರ್ಟ್.
ನವದೆಹಲಿ: ಬಹುವ್ಯಕ್ತಿಗಳ ಜಂಟಿ ಒಡೆತನದ ದಾವೆಗೆ ಎಲ್ಲರನ್ನೂ ಪ್ರತಿವಾದಿಗಳನ್ನಾಗಿ ಮಾಡದಿದ್ದರೇ ಆ ಮೊಕದ್ದಮೆಯನ್ನ ವಜಾ ಮಾಡಲಾಗುತ್ತದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾ. ಬಿ.ಆರ್. ಗವಾಯಿ ಹಾಗೂ ನ್ಯಾ.ಸಿ.ಟಿ. ರವಿ ಕುಮಾರ್ ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪನ್ನು ನೀಡಿದೆ.
ನಿರ್ದಿಷ್ಟ ಕಾರ್ಯಕ್ಷಮತೆಗಾಗಿ ದಾವೆ ಹೂಡುವ ಸ0ದರ್ಭದಲ್ಲಿ ಆಸ್ತಿಯು ಹಲವಾರು ವ್ಯಕ್ತಿಗಳ ಜಂಟಿಯಾಗಿ ಒಡೆತನದಲ್ಲಿ ಇದ್ದಾಗ ಅವರೆಲ್ಲರನ್ನೂ ಮೊಕದ್ದಮೆಗೆ ಪ್ರತಿವಾದಿಗಳನ್ನಾಗಿ ಮಾಡಬೇಕು. ಇಲ್ಲದಿದ್ದರೇ ಮೊಕದ್ದಮೆಯನ್ನು ವಜಾಗೊಳಿಸಬೇಕಾಗುತ್ತದೆ ಎ0ದು ಸುಪ್ರೀಂ ಕೋರ್ಟ್ ನ್ಯಾಯಪೀಠ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ