23/12/2024

Law Guide Kannada

Online Guide

The Allahabad High Court has given an important judgment that after the death of the husband, his parents have the authority to file the case filed by the husband seeking annulment of the marriage after his wife married him for the second time fraudulently.

ವಿವಾಹ ಅಸಿಂಧು ಕೋರಿದ ಪ್ರಕರಣ: ಪತಿ ಮೃತಪಟ್ಟರೇ ಆತನ ಪೋಷಕರಿಗಿದೆ ಕೇಸ್ ಮುನ್ನಡೆಸುವ ಅಧಿಕಾರ- ಹೈಕೋರ್ಟ್
ಅಲಹಾಬಾದ್: ಪತ್ನಿ ಮೋಸದಿಂದ ತನ್ನೊಂದಿಗೆ 2ನೇ ಮದುವೆಯಾದ ಹಿನ್ನೆಲೆ ವಿವಾಹವನ್ನ ಅಸಿಂಧುಗೊಳಿಸಲು ಕೋರಿ ಪತಿ ದಾಖಲಿಸಿದ್ದ ಪ್ರಕರಣವನ್ನ ಪತಿಯ ಮರಣದ ನ0ತರ ಆತನ ಪೋಷಕರು ಮುನ್ನಡಸಲು ಅಧಿಕಾರವಿದೆ ಎ0ದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಹಿ0ದೂ ವಿವಾಹ ಕಾಯ್ದೆ ಸೆಕ್ಷನ್ 11 ರ ಅಡಿಯಲ್ಲಿ ವಿವಾಹ ಅಸಿ0ಧು ಎ0ದು ಘೋಷಿಸಲು ಕೋರಿ ಪತಿ ದಾಖಲಿಸಿದ್ದ ಪ್ರಕರಣವನ್ನು ಪತಿಯ ಮರಣದ ನ0ತರ ಆತನ ಪೋಷಕರು ಮುನ್ನಡೆಸಬಹುದು. ವಿವಾಹ ಅಸಿಂಧುಗೊಳಿಸುವಂತೆ ಪತಿ ಪ್ರಕರಣ ದಾಖಲಿಸಿ ಮೃತಪಟ್ಟರೇ ನಂತರ ಆ ಪ್ರಕರಣವನ್ನ ಆತನ ಪೋಷಕರು ಮುನ್ನಡೆಸಬಹುದು. ಸಿವಿಲ್ ಪ್ರೊಸೀಜರ್ ಕೋಡ್ ನ ಆರ್ಡರ್ 22 ರೂಲ್ 3 ರ ಅಡಿಯಲ್ಲಿ ಆತನ ಪೋಷಕರು ಇ0ತಹ ಅಧಿಕಾರ ಹೊಂದಿದ್ದಾರೆ ಎ0ದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ವ್ಯಕ್ತಿಯೊಬ್ಬರು ತನ್ನ ಪತ್ನಿಗೆ ಈಗಾಗಲೇ ಮದುವೆಯಾಗಿದ್ದು, ಅದನ್ನು ಮುಚ್ಚಿಟ್ಟು ಮೋಸದಿ0ದ ತನ್ನೊಂದಿಗೆ ಎರಡನೇ ವಿವಾಹ ಮಾಡಿಕೊಂಡಿದ್ದಾರೆ. ಹೀಗಾಗಿ ವಿವಾಹವನ್ನು ಅಸಿ0ಧು ಎ0ದು ಘೋಷಿಸಬೇಕು ಎ0ದು ಕೋರಿ ಪತಿ 2022ರ ಏಪ್ರಿಲ್ 5ರಂದು ಹಿ0ದೂ ವಿವಾಹ ಕಾಯ್ದೆಯ ಸೆಕ್ಷನ್ 11 ರ ಅಡಿಯಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪತ್ನಿ ತಾನು ಈ ಮೊದಲು ಯಾವುದೇ ವಿವಾಹವಾಗಿಲ್ಲ ಎ0ದಿದ್ದರಲ್ಲದೇ, ಅದಕ್ಕೆ ಸ0ಬ0ಧಿಸಿದ0ತೆ ಕೆಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಯುವ ಸಂದರ್ಭದಲ್ಲೇ 2023ರ ಫೆಬ್ರವರಿ 24 ರಂದು ಪತಿ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ಪುತ್ರನ ಸಾವಿನ ಬಳಿಕ ಆತನ ಪೋಷಕರು ಸಿವಿಲ್ ಪ್ರೊಸೀಜರ್ ಕೋಡ್ ನ ಆರ್ಡರ್ 22 ರೂಲ್ 3 ರ ಅಡಿಯಲ್ಲಿ ಅರ್ಜಿ ಸಲ್ಲಿಸಿ ಪ್ರಕರಣವನ್ನು ಮುನ್ನಡೆಸಲು ಕೋರಿದ್ದರು. ಇದಕ್ಕೆ ಆಕ್ಟೇಪಿಸಿದ್ದ ಪತ್ನಿ, ಪ್ರಕರಣ ದಾಖಲಿಸಿದ್ದ ಅರ್ಜಿದಾರ (ಪತಿ) ಈಗಾಗಲೇ ಮೃತಪಟ್ಟಿರುವುದರಿ0ದ ಪ್ರಕರಣವನ್ನು ಕೊನೆಗೊಳಿಸಬೇಕು ಮತ್ತು ವಿವಾದವನ್ನು ಮುಂದುವರೆಸಲು ಸಾಧ್ಯವಿಲ್ಲ ಎ0ದು ವಾದಿಸಿದ್ದರು. ಜತೆಗೆ ಪೋಷಕರ ಅರ್ಜಿಯನ್ನು ತಿರಸ್ಕರಿಸುವ0ತೆ ಕೋರಿದ್ದರು.

ಆದರೆ ಕೌಟುಂಬಿಕ ನ್ಯಾಯಾಲಯ ನಿಯಮಾನುಸಾರ ಪೋಷಕರ ಅರ್ಜಿಯನ್ನು ಪುರಸ್ಕರಿಸಿ, ಪ್ರಕರಣ ಮುಂದುವರೆಸುವುದಾಗಿ ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಪತ್ನಿ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಕೌಟುಂಬಿಕ ನ್ಯಾಯಾಲಯ ಆದೇಶ ಎತ್ತಿಹಿಡಿದ ಹೈಕೋರ್ಟ್
ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಹಿ0ದೂ ವಿವಾಹ ಕಾಯ್ದೆಯ ಸೆಕ್ಟನ್ 11 ರ ಅಡಿಯಲ್ಲಿ ದಾಖಲಿಸಿದ ಪ್ರಕರಣಗಳಲ್ಲಿ ಕೌಟುಂಬಿಕ ನ್ಯಾಯಾಲಯದ ಮುಂದೆ ಬಾಕಿ ಇರುವ ಪ್ರಕ್ರಿಯೆಗಳಲ್ಲಿ ಸಿವಿಲ್ ಪ್ರೊಸೀಜರ್ ಕೋಡ್ ನ ಆರ್ಡರ್ 22 ರ ನಿಬಂಧನೆಗಳು ಅನ್ವಯವಾಗುತ್ತವೆ. ಅದರಂತೆ ಮೃತಪಟ್ಟಿರುವ ಪತಿಯ ಪೋಷಕರು ಸಲ್ಲಿಸಿರುವ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ಪರಿಗಣಿಸಿರುವ ಶ್ರಮ ಸರಿಯಿದೆ ಎನ್ನುವ ಮೂಲಕ ಕೌಟುಂಬಿಕ ನ್ಯಾಯಾಲಯದ ಆದೇಶ ಎತ್ತಿ ಹಿಡಿದೆ. ಜತೆಗೆ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.