The High Court, upholding the order dismissing a conductor by the Karnataka State Road Transport Corporation (KSRTC) on the charge of not issuing tickets to passengers, ruled that ‘a dereliction of duty conductor cannot be shown mercy.
‘ಕರ್ತವ್ಯ ಲೋಪವೆಸಗಿದ ಕಂಡಕ್ಟರ್ ಗೆ ಅನುಕಂಪ ತೋರಲು ಸಾಧ್ಯವಿಲ್ಲ’: KSRTC ಆದೇಶ ಎತ್ತಿ ಹಿಡಿದ ಹೈಕೋರ್ಟ್.
ಬೆಂಗಳೂರು: ಪ್ರಯಾಣಿಕರಿಗೆ ಟಿಕೆಟ್ ನೀಡದೆ ಕರ್ತವ್ಯ ಮಾಡಿದ ಆರೋಪದ ಮೇಲೆ ನಿರ್ವಾಹಕರೊಬ್ಬರನ್ನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸ0ಸ್ಥೆ (KSRTC) ಯು ವಜಾಗೊಳಿಸಿದ ಆದೇಶವನ್ನ ಎತ್ತಿ ಹಿಡಿದ ಹೈಕೋರ್ಟ್ , ‘ಕರ್ತವ್ಯ ಲೋಪವೆಸಗಿದ ಕಂಡಕ್ಟರ್ ಗೆ ಅನುಕಂಪ ತೋರಲು ಸಾಧ್ಯವಿಲ್ಲ ಎಂದು ತೀರ್ಪನಿತ್ತಿದೆ.
ಕರ್ತವ್ಯ ಲೋಪದ ಮೇಲೆ ನಿರ್ವಾಹಕನನ್ನು ವಜಾಗೊಳಿಸಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆದೇಶವನ್ನು ಕಾರ್ಮಿಕ ನ್ಯಾಯಾಲಯ ರದ್ದುಪಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಯವರು ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ನ ನ್ಯಾ. ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠವು ಕೆಎಸ್ ಆರ್ ಟಿಸಿ ಅದೇಶವನ್ನ ಎತ್ತಿ ಹಿಡಿದಿದೆ.
ಕೆಎಸ್ ಆರ್ ಟಿಸಿಯಲ್ಲಿ ನಿರ್ವಾಹಕನಾಗಿದ್ದ ಕಾರ್ಮಿಕನಿಗೆ ಸ0ಸ್ಥೆ ವೇತನ ಮತ್ತು ಸವಲತ್ತುಗಳನ್ನು ನೀಡಿದರೂ ಸಹ ಅವರು ಸಂಸ್ಥೆಗೆ ತನ್ನ ಪ್ರಾಮಾಣಿಕ ಸೇವೆಯನ್ನು ನೀಡಿಲ್ಲ. ಪ್ರಯಾಣಿಕರಿಗೆ ಟಿಕೆಟ್ ನೀಡದೆ ಹಣವನ್ನೂ ಸಂಗ್ರಹಿಸದೆ ಈ ಮೂಲಕ ಕರ್ತವ್ಯ ಲೋಪವೆಸಗಿದ್ದಾರೆ. ಇಂತಹುದೇ ಲೋಪಗಳನ್ನು ಹಲವು ಬಾರಿ ಎಸಗಿದ್ದಾರೆ. 122 ಬಾರಿ ಕರ್ತವ್ಯ ಲೋಪ ಎಸಗಿರುವ ಆರೋಪ ಹೊತ್ತಿರುವ ನಿರ್ವಾಹಕನಿಗೆ ಅನುಕ0ಪ ತೋರಲು ಸಾಧ್ಯವಿಲ್ಲ. ನಿರ್ವಾಹಕನನ್ನು ವಜಾಗೊಳಿಸಿದ ಕೆಎಸ್ಆರ್ ಟಿಸಿಯ ಆದೇಶ ಸರಿಯಾಗಿದೆ ಎ0ದು ಹೈಕೋರ್ಟ್ ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಹಾಗೆಯೇ ಇ0ತಹ ಕಾರ್ಮಿಕನನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳುವಂತೆ ಮೈಸೂರಿನ ಕಾರ್ಮಿಕ ನ್ಯಾಯಾಲಯ ನೀಡಿದ ತೀರ್ಪು ದೋಷಪೂರಿತವಾಗಿದೆ ಎ0ದು ಈ ಆದೇಶವನ್ನು ರದ್ದುಗೊಳಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ