Claim in immovable property even if no document is filed: High Court pronounces landmark judgement
ಯಾವುದೇ ದಾಖಲೆ ಸಲ್ಲಿಸದಿದ್ದರೂ ಸ್ಥಿರಾಸ್ತಿಯಲ್ಲಿ ಹಕ್ಕು: ಮಹತ್ವದ ತೀರ್ಪು ಪ್ರಕಟಿಸಿದ ಹೈಕೋರ್ಟ್
ಬೆಂಗಳೂರು: ಯಾವುದೇ ದಾಖಲೆ ಸಲ್ಲಿಸದಿದ್ದರೂ ಸ್ಥಿರಾಸ್ತಿಯಲ್ಲಿ ಹಕ್ಕು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ಹೌದು, ಒಬ್ಬ ವ್ಯಕ್ತಿಯು ಯಾವುದೇ ದಾಖಲೆ ಸಲ್ಲಿಸದಿದ್ದರೂ ಸ್ಥಿರಾಸ್ತಿಯಲ್ಲಿ ಹಕ್ಕು ಸ್ಥಾಪಿಸಬಹುದೇ.? ಎಂಬ ಸಮಸ್ಯೆಯನ್ನ ಕರ್ನಾಟಕ ಹೈಕೋರ್ಟ್ ಪರಿಹರಿಸಿದೆ.
ಈ ಕುರಿತು ಮಹತ್ವದ ತೀರ್ಪು ನೀಡಿರುವ ಹೈಕೋರ್ಟ್ನ ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸ್ಥಿರಾಸ್ತಿಯನ್ನು ದೀರ್ಘ ಕಾಲದಿ0ದ ಸ್ವಾಧೀನ ಇಟ್ಟುಕೊಂಡಿದ್ದು, ತನ್ನ ಹೆಸರಿನಲ್ಲಿ ರೆವೆನ್ಯೂ ದಾಖಲೆಗಳನ್ನು ಒಬ್ಬ ವ್ಯಕ್ತಿ ಹೊ0ದಿದ್ದರೆ ಆಗ ಆತ ಯಾವುದೇ ದಾಖಲೆಯನ್ನು ಸಲ್ಲಿಸದಿದ್ದರೂ ಆ ಸ್ಥಿರಾಸ್ತಿಯಲ್ಲಿ ಆತನಿಗೆ ಆತನ ಹಕ್ಕನ್ನು ಘೋಷಿಸಲು ಯಾವುದೇ ಅಡ್ಡಿ ಇರುವುದಿಲ್ಲ ಎ0ದು ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ