He cannot read English, Kannada, nor can he write. Even so, 623(99.52%) marks in SSLC. The post of constable in the court is based on these marks, the judge, who was surprised and expressed doubts, has instructed to conduct an investigation
ಓದು ಬರಹ ಬರದಿದ್ರೂ ಎಸ್ ಎಸ್ ಎಲ್ ಸಿಯಲ್ಲಿ 623 ಮಾರ್ಕ್ಸ್, ಕೋರ್ಟ್ ನಲ್ಲಿ ಕೆಲಸ: ತನಿಖೆಗೆ ಸೂಚಿಸಿದ ಜಡ್ಜ್..
ಕೊಪ್ಪಳ: ಈತನಿಗೆ ಇಂಗ್ಲೀಷ್, ಕನ್ನಡ ಓದಲು ಬರಲ್ಲ, ಬರೆಯುವುದಕ್ಕೂ ಬರುವುದಿಲ್ಲ. ಹೀಗಿದ್ದರೂ ಎಸ್ ಎಸ್ ಎಲ್ ಸಿಯಲ್ಲಿ 623(99.52%) ಅಂಕ. ಈ ಮಾರ್ಕ್ಸ್ ಆಧಾರದ ಮೇಲೆಯೇ ನ್ಯಾಯಾಲಯದಲ್ಲಿ ಜವಾನ ಹುದ್ದೆ, ಇದನ್ನ ಗಮನಿಸಿ ಅಚ್ಚರಿಗೊಂಡು ಅನುಮಾನ ವ್ಯಕ್ತಪಡಿಸಿದ ನ್ಯಾಯಾಧೀಶರು ತನಿಖೆ ನಡೆಸಲು ಸೂಚನೆ ನೀಡಿದ್ದಾರೆ.
ಕೊಪ್ಪಳ ನಗರದ ಸಜ್ಜೆ ಓಣಿ ನಿವಾಸಿ ಪ್ರಭು ಲೋಕರೆ ಎಂಬುವವನ ವಿರುದ್ದವೇ ಈ ಆರೋಪ ಕೇಳಿ ಬಂದಿರುವುದು. ಇದೀಗ ನ್ಯಾಯಾಧೀಶರ ವರದಿ ಆದರಿಸಿ ಪೊಲೀಸರಿಗೆ ದೂರು ನೀಡಲಾಗಿದ್ದು, ಅದರಂತೆ ಕೊಪ್ಪಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಈತನೊಂದಿಗೆ ಲಾಭಕ್ಕಾಗಿ ಶಾಮೀಲಾದವರ ವಿರುದ್ಧ ತನಿಖೆ ನಡೆಸಬೇಕೇಂದು ನ್ಯಾಯಾಧೀಶರು ಕೋರಿದ್ದಾರೆ.
ಕೊಪ್ಪಳ ನಗರದ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಕಳೆದ ಕೆಲ ವರ್ಷಗಳಿಂದ ಪ್ರಭು ಲೋಕರೆ ಎಂಬ 23 ವರ್ಷದ ಯುವಕ, ಸ್ಕ್ಯಾವೆಂಜರ್ ಅಂದರೆ ಸ್ವಚ್ಚತಾ ಕೆಲಸ ಮಾಡುತ್ತಿದ್ದ. 7ನೇ ತರಗತಿವರಗೆ ವ್ಯಾಸಂಗ ಮಾಡಿದ್ದ ಪ್ರಭು, ಶಾಲೆ ಬಿಟ್ಟು ಕೋರ್ಟ್ ನಲ್ಲಿ ಸ್ವಚ್ಛತಾ ಕೆಲಸ ಮಾಡಿಕೊಂಡಿದ್ದ. ಕಳೆದ ವರ್ಷವಷ್ಟೇ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿರುವ ಖಾಸಗಿ ಪರೀಕ್ಷಾ ಕೇಂದ್ರದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಶೇ 99.52 ರಷ್ಟು ಅಂಕ ಪಡೆದಿದ್ದಾನೆ ರೆಗ್ಯೂಲರ್ ವಿದ್ಯಾರ್ಥಿಯಾಗದೇ ನೇರವಾಗಿ ಪರೀಕ್ಷೆ ಬರೆದು 623 ಅಂಕ ಗಳಿಸಿದ್ದಾನೆ.
ಈ ಅಂಕಗಳ ಆಧಾರದ ಮೇಲೆಯೇ ಪ್ರಭು ಯಾದಗಿರಿಯಲ್ಲಿರುವ ಜಿಲ್ಲಾ ಮತ್ತ ಸತ್ರ ನ್ಯಾಯಾಲಯದಲ್ಲಿ ಜವಾನ ಹುದ್ದೆಗೆ ಆಯ್ಕೆಯಾಗಿದ್ದಾನೆ. 2024 ರ ಎಪ್ರಿಲ್ 22 ರಂದು ಜವಾನ ಹುದ್ದೆಯ ಅಂತಿಮ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಆ ಆಯ್ಕೆ ಪಟ್ಟಿಯಲ್ಲಿ ಪ್ರಭು ಲೋಕರೆ ಹೆಸರು ಇದೆ.
ಆದರೆ ಪ್ರಭು ಯಾದಗಿರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯದಲ್ಲಿ ಜವಾನ ಆಗಿ ಆಯ್ಕೆಯಾಗಿದ್ದು, ಕೊಪ್ಪಳ ಜೆಎಂಎಫ್ ಸಿ ನ್ಯಾಯಾಧೀಶರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಯಾಕಂದ್ರೆ ಕಳೆದ ಕೆಲ ವರ್ಷಗಳಿಂದ ಕೊಪ್ಪಳ ನ್ಯಾಯಾಲಯದಲ್ಲಿ ಪ್ರಭು ವನ್ನು ನೋಡಿದ್ದರು. ಆತ ಎಂದಿಗೂ ಶಾಲೆಗೆ ಹೋಗಿದನ್ನು ಯಾರು ನೋಡಿರಲಿಲ್ಲಾ. ಜೊತೆಗೆ ಆತನಿಗೆ ಕನ್ನಡ ಸೇರಿದಂತೆ ಇಂಗ್ಲಿಷ್, ಹಿಂದಿ ಭಾಷೆಯನ್ನು ಸ್ಪಷ್ಟವಾಗಿ ಓದಲು, ಬರೆಯಲು ಕೂಡಾ ಬರೋದಿಲ್ಲಾ ಅನ್ನೋದನ್ನು ಅನೇಕ ಬಲ್ಲ ಮಾಹಿತಿಗಳ ಮೂಲಕ ತಿಳಿದುಕೊಂಡಿದ್ದರು. ಆದ್ರೆ ಇಂತಹ ವ್ಯಕ್ತಿ ಜವಾನ ಆಗಿ ಆಯ್ಕೆಯಾಗಿದ್ದು ಸ್ವತ ಜಡ್ಜ್ ಅವರಿಗೆ ಅಚ್ಚರಿಗೆ ಕಾರಣವಾಗಿತ್ತು.
ನ್ಯಾಯಾಧೀಶರಿಂದ ಸೂಚನೆ…
ಈತ ಪರೀಕ್ಷೆ ಬರೆದು ಪಾಸಾದನೇ ಅಥವಾ ಬೇರೆ ಯಾರಾದರೂ ಪರೀಕ್ಷೆ ಬರೆದರೆ, ಈತ ಬರೆದ ಪತ್ರಿಕೆ ಮತ್ತು ಈತನ ಕೈಬರಹಕ್ಕೆ ಹೋಲಿಕೆ ಮಾಡಿದರೇ ಸತ್ಯಾಸತ್ಯತೆ ಗೊತ್ತಾಗುತ್ತದೆ ಹಾಗೆಯೇ ಇದರ ಹಿಂದೆ ದೊಡ್ಡ ಅಪರಾಧದ ಜಾಲವೇ ಇರುವ ಸಾಧ್ಯತೆ ಇದೆ. ಹೀಗಾಗಿ ಇದೆಲ್ಲವನ್ನೂ ತನಿಖೆ ಮಾಡಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆಗುವ ಅನ್ಯಾಯ ಸರಿಪಡಿಸಬೇಕು . ವ್ಯವಸ್ಥೆಯನ್ನೇ ಹಾಳು ಮಾಡುವ ಇಂತಹ ಜಾಲವನ್ನ ಪತ್ತೆ ಮಾಡಿ ಶಿಕ್ಷೆ ನೀಡಬೇಕು. ದೇಶದ ಭವಿಷ್ಯವನ್ನ ರಕ್ಷಣೆ ಮಾಡಲು ವಿವರವಾದ ತನಿಖೆ ಮಾಡಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಸ್ಪಷ್ಟನೆ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿರುವ ಖಾಸಗಿ ಪರೀಕ್ಷಾ ಕೇಂದ್ರದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಾನೆಂಬ ಮಾಹಿತಿ ಇರುವ ಹಿನ್ನೆಲೆಯಲ್ಲಿ ಈ ಬಗ್ಗೆ ಬಾಗಲಕೋಟೆಯ ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಸ್ಪಷ್ಟನೆ ನೀಡಿದೆ.
ಪ್ರಭು ಲಕ್ಷ್ಮಿಕಾಂತ ಲೋಕರೆ( SSLC ಉತ್ತೀರ್ಣರಾದ ವರ್ಷ ಮೇ 2018, ನೊಂದಣಿ ಸಂಖ್ಯೆ KSDEEB00221) ಎಂಬ ಅಭ್ಯರ್ಥಿಯು ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬಾಹ್ಯವಾಗಿ ಉತ್ತೀರ್ಣರಾಗಿದ್ದು ಹಾಗೂ ಸದರಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡ ಸಂಸ್ಥೆಯು ರಾಜ್ಯ ಸರಕಾರದ ಪರೀಕ್ಷಾ ಮಂಡಳಿಯಾಗಿರುವುದಿಲ್ಲವೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯವು ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟೆ ಇವರಿಗೆ ಮಾಹಿತಿ ನೀಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
Judge Orders Investigation – Click to view PDF File