23/12/2024

Law Guide Kannada

Online Guide

The Supreme Court has expressed an important opinion that advocacy does not come under the purview of the Consumer Protection Act, 1986.

‘ವಕೀಲಿಕೆಯು’ ಗ್ರಾಹಕ ಸಂರಕ್ಷಣಾ ಕಾಯ್ದೆ ವ್ಯಾಪ್ತಿಗೆ ಒಳಪಡಲ್ಲ- ಸುಪ್ರೀಂ ಮಹತ್ವದ ಅಭಿಪ್ರಾಯ.

ನವದೆಹಲಿ: ವಕೀಲಿಕೆ ಗ್ರಾಹಕ ಸಂರಕ್ಷಣಾ ಕಾಯ್ದೆ 1986ರ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ (ಎನ್ಸಿಡಿಆರ್ಸಿ) 2007ರ ತೀರ್ಪನ್ನು ಪ್ರಶ್ನಿಸಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ, ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್ ಮತ್ತು ಬಾರ್ ಆಫ್ ಇಂಡಿಯನ್ ಲಾಯರ್ಸ್ ಸಲ್ಲಿಸಿದ್ದ ಮನವಿ ಮೇರೆಗೆ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಪಂಕಜ್ ಮಿಥಾಲ್ ಅವರಿದ್ದ ಪೀಠ, ವಕೀಲ ವೃತ್ತಿ ವಿಶಿಷ್ಟವಾಗಿದ್ದು, ವಕೀಲ ವೃತ್ತಿಯನ್ನು ಇತರ ಕೆಲಸಗಳಿಗೆ ಹೋಲಿಸಲು ಸಾಧ್ಯವಿಲ್ಲ. ಹೀಗಾಗಿ ಅವರ ಕಳಪೆ ಸೇವೆಗೆ ದಂಡ ವಿಧಿಸುವಂತೆ ಗ್ರಾಹಕರ ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡಲು ಬರುವುದಿಲ್ಲ. ಕಕ್ಷಿದಾರರು ವಕೀಲರ ಮೇಲೆ ನಿಯಂತ್ರಣ ಹೊಂದಿದ್ದು, ವಕೀಲರು ಕಕ್ಷಿದಾರರ ಸ್ವಾಯತ್ತತೆ ಗೌರವಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಕಕ್ಷಿದಾರರಿಂದ ಸ್ಪಷ್ಟ ಸೂಚನೆಗಳಿಲ್ಲದೆ ಏನಾಯಿತಿ ಪಡೆಯಲು, ಅಧಿಕಾರ ಉಲ್ಲಂಘಿಸಲು ವಕೀಲರು ಅರ್ಹರಾಗಿರುವುದಿಲ್ಲ. ಪ್ರಕರಣದಲ್ಲಿ ಕಕ್ಷಿದಾರರೇ ಹೆಚ್ಚು ನಿಯಂತ್ರಣ ಹೊಂದಿರುತ್ತಾರೆ. ಒಪ್ಪಂದ ವೈಯಕ್ತಿಕ ಸೇವೆ ಆಗಿದ್ದು, “ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಬರುವುದಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.