23/12/2024

Law Guide Kannada

Online Guide

After a court staff influenced him to issue a supplementary order in relation to a case, the judge issued an order withdrawing from the hearing of the case and received widespread praise

ಪೂರಕ ಆದೇಶಕ್ಕೆ ಪ್ರಭಾವ ಬೀರಿದ ಕೋರ್ಟ್ ಸಿಬ್ಬಂದಿ: ದಿಟ್ಟ ಹೆಜ್ಜೆ ಇಟ್ಟು ವ್ಯಾಪಕ ಪ್ರಶಂಸೆಗೆ ಪಾತ್ರರಾದ ನ್ಯಾಯಾಧೀಶರು.

ಆನೇಕಲ್: ಪ್ರಕರಣವೊ೦ದಕ್ಕೆ ಸಂಬಂಧಿಸಿದಂತೆ ಪೂರಕ ಆದೇಶ ಹೊರಡಿಸುವಂತೆ ಕೋರ್ಟ್ ಸಿಬ್ಬಂದಿಯೊಬ್ಬರು ಪ್ರಭಾವ ಬೀರಿದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಪ್ರಕರಣದ ವಿಚಾರಣೆಯಿಂದಲೇ ಹಿಂದೆ ಸರಿಯುವ ಆದೇಶ ಪ್ರಕಟಿಸಿ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಈ ಮೂಲಕ ರಾಜ್ಯದ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರು ಭ್ರಷ್ಟಾಚಾರದ ವಿರುದ್ದದ ಹೋರಾಟದಲ್ಲಿ ಮಾದರಿಯಾಗಿದ್ದು, ಆನೇಕಲ್ನ ನ್ಯಾಯಾಧೀಶರ ದಿಟ್ಟತನ ಮತ್ತು ಆದೇಶಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಏಪ್ರಿಲ್ 27,2024ರ೦ದು ಈ ಆದೇಶ ಹೊರಡಿಸಲಾಗಿದ್ದು, ಮೂಲ ದಾವೆ (OS) 381/2020ರ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿತ್ತು. ಉಭಯ ಪಕ್ಷಕಾರರ ಪರ ವಕೀಲರು ಗೈರು ಹಾಜರಾಗಿದ್ದರು.

ಪ್ರಕರಣಕ್ಕೆ ಸ೦ಬ೦ಧಿಸಿದ೦ತೆ ವಿಚಾರಣೆ ನಡೆಸಿದ ನ್ಯಾಯಾಧೀಶರಿಗೆ ಕೋರ್ಟ್ ಸಿಬ್ಬಂದಿಯೊಬ್ಬರು ಪ್ರಭಾವ ಬೀರಿದ್ದು ಈ ಹಿನ್ನೆಲೆಯಲ್ಲಿ ವಿಚಾರಣೆಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡ ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬ೦ದಿಯೊಬ್ಬರು ನನ್ನನ್ನು ಸ೦ಪರ್ಕಿಸಿ ಪೂರಕವಾದ ಆದೇಶ ಹೊರಡಿಸುವಂತೆ ಪ್ರಭಾವ ಬೀರಿರುತ್ತಾರೆ. ನನ್ನ ಸಾಕ್ಷಿಪ್ರಜ್ಞೆ ಇದಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ನಾನು ಪ್ರಕರಣದ ನ್ಯಾಯವಿಚಾರಣೆಯಿಂದ ಹಿ೦ದೆ ಸರಿಯಲು ಬಯಸುತ್ತೇನೆ. ಆದುದರಿಂದ ಈ ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎ೦ದು ನಾನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಗೆ ವಿನಮ್ರತಾಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಈ ಸಂಬಂಧ ಮನವಿಪತ್ರವನ್ನು ಕಳುಹಿಸುವಂತೆ ನಾನು ನ್ಯಾಯಾಲಯದ ಮುಖ್ಯ ಲಿಪಿಕಾಧಿಕಾರಿಯವರಿಗೆ ನಿರ್ದೇಶಿಸುತ್ತೇನೆ” ಎ೦ದು ಆದೇಶ ಹೊರಡಿಸಿದರು. ಬಳಿಕ ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 4ಕ್ಕೆ ಮು೦ದೂಡಲಾಯಿತು.

ಈ ಬೆನ್ನಲ್ಲೆ ನ್ಯಾಯವ್ಯವಸ್ಥೆಗೆ ಮಸಿ ಬಳಿಯಲು ಯತ್ನಿಸಿದ ನ್ಯಾಯಾಲಯದ ಸಿಬ್ಬಂದಿಗೆ ತಕ್ಕ ಶಿಕ್ಷೆಯಾಗಬೇಕು ಎ೦ಬ ಒತ್ತಾಯ ಕೇಳಿ ಬಂದಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.