Penalty for bank not providing property document
ಆಸ್ತಿ ದಾಖಲೆ ನೀಡದ ಬ್ಯಾಂಕ್ ಗೆ ದಂಡ
ದಾವಣಗೆರೆ:
ಸಾಲ ಪಡೆದಿದ್ದ ಮಗ ಮೃತಪಟ್ಟ ನಂತರ ಆತ ಮಾಡಿದ ಸಾಲವನ್ನು ತಂದೆ ತೀರಿಸಿದರೂ ಅವರಿಗೆ ಆಸ್ತಿಯ ದಾಖಲೆ ನೀಡದೇ ಸತಾಯಿಸಿದ ರಾಷ್ಟ್ರೀಕೃತ ಬ್ಯಾಂಕೊಂದಕ್ಕೆ ಹೈಕೋರ್ಟ್ ಎರಡು ಲಕ್ಷ ರೂಪಾಯಿ ದಂಡ ವಿಧಿಸಿದೆ.
ದಾವಣಗೆರೆಯ ಎಂ.ಬಿ.ಅಗ್ರೋಫುಡ್ ಇಂಡಸ್ಟ್ರೀಸ್ ಲಿಮಿಟೆಡ್ ನಿರ್ದೇಶಕ ಎಂ.ಬಿ.ಸೋಮಶೇಖರ್ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಈ ತೀರ್ಪು ನೀಡಿದ್ದಾರೆ.
ಸೋಮಶೇಖರ ಗೌಡ ಅವರ ಪುತ್ರ ಬ್ಯಾಂಕ್ ವೊಂದರಲ್ಲಿ ಸಾಲ ಪಡೆದಿದ್ದರು. ಸಾಲ ತೀರುವ ಮುನ್ನವೇ ನಿಧನರಾದರು. ನಂತರ ಸೋಮಶೇಖರ ಗೌಡ ಪುತ್ರ ಮಾಡಿದ ಸಾಲವನ್ನು ತೀರಿಸಿದರು. ಆದರೂ ಬ್ಯಾಂಕ್ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳನ್ನು ನೀಡಲಿಲ್ಲ. ಇದನ್ನು ಪ್ರಶ್ನಿಸಿ ಸೋಮಶೇಖರ ಗೌಡ ಹೈಕೋರ್ಟ್ ಮೆಟ್ಟಿಲೇರಿದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ