Vakalat only if you pass All India Bar Exam – AIBE
ಎಐಬಿಇ ಪಾಸಾದರೆ ಮಾತ್ರ ವಕಾಲತ್
ಬೆಂಗಳೂರು: ಅಖಿಲ ಭಾರತ ವಕೀಲರ ಪರೀಕ್ಷೆ (ಎಐಬಿಇ) ಪಾಸಾಗದೇ ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸುವ ವಕೀಲರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ವಕೀಲರ ಪರಿಷತ್ತು ಎಚ್ಚರಿಸಿದೆ.
ವಕೀಲರಾಗಿ ಹೆಸರು ನೋಂದಾಯಿಸಿರುವ ಕಾನೂನು ಪದವೀಧರರು ಎಐಬಿಇ ಪರೀಕ್ಷೆ ಪಾಸಾಗಬೇಕು. ಆದರೆ, ಎಐಬಿಇ ಪರೀಕ್ಷೆ ಪಾಸಾಗದೇ ವಕಾಲತ್ ಗೆ ಸಹಿ ಮಾಡಿ ನಿಯಮ ಬಾಹಿರವಾಗಿ ವಕೀಲಿಕೆ ನಡೆಸುತ್ತಿರುವುದು ಗಮನಕೆ ಬಂದಿದೆ ಎಂದು ರಾಜ್ಯ ವಕೀಲರ ಪರಿಷತ್ತು ಅಧ್ಯಕ್ಷ ಎಚ್. ಎಲ್. ವಿಶಾಲ್ ರಘ ತಿಳಿಸಿದ್ದಾರೆ
ವಿಶಾಲ್ ರಘ ಅವರು ರಾಜ್ಯದ ಎಲ್ಲ ವಕೀಲರ ಸಂಘಗಳಿಗೆ ಪತ್ರ ಬರೆದು ಎಐಬಿಇ ಪರೀಕ್ಷೆ ಪಾಸಾಗದ ವಕೀಲರಿಗೆ ವಕೀಲರ ಸಂಘಗಳು ಸದಸ್ಯತ್ವ ನೀಡಬೇಕು. ಆದರೆ, ಮತದಾನದ ಹಕ್ಕನ್ನು ನೀಡಬಾರದು ಎಂದು ಮನವಿ ಮಾಡಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ