POCSO case dismissed
ಪೋಕ್ಸೋ ಪ್ರಕರಣ ರದ್ದು
ಬೆಂಗಳೂರು: ಆತನ ವಯಸ್ಸು ಇಪ್ಪತ್ತು. ಮದುವೆಯಾಗಿ ಮಗುವಿದೆ. ಅಪ್ರಾಪ್ತೆಯನ್ನು ಮದುವೆಯಾಗಿ ಪೋಕ್ಸೋ ಪ್ರಕರಣದ ಆರೋಪಿಯಾಗಿದ್ದಾನೆ. ಕುಟುಂಬದ ಆಧಾರಸ್ತಂಭ ಆತನೇ ಆಗಿರುವ ಕಾರಣ ಹೈಕೋರ್ಟ್ ಆರೋಪಿ ವಿರುದ್ದದ ಪೋಕ್ಸೋ ಪ್ರಕರಣ ವನ್ನು ರದ್ದುಪಡಿಸಿದೆ.
ಆರೋಪಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ಜ ನ್ಯಾಯಪೀಠವು ಈ ಕುರಿತು ಆದೇಶ ಹೊರಡಿಸಿದೆ.
ಅಪ್ರಾಪ್ತೆ ಹಾಗೂ ಆಕೆಯ ತಾಯಿ ಈ ಕುರಿತು ಜಂಟಿ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ.
ಕಾನೂನಿನ ಅರಿವಿಲ್ಲದೆ ಪುತ್ರಿಯ ವಿವಾಹ ಅನಿರೀಕ್ಷಿತವಾಗಿ ನಡೆದಿದೆ. ಪುತ್ರಿಗೆ ಮಗುವಿದೆ. ವಿವಾಹಕ್ಕೆ ಕಾನೂನುಬದ್ದ ವಯಸ್ಸು ಆದ ಕೂಡಲೇ ದಂಪತಿ ಕಾನೂನಿನ ಅನ್ವಯ ವಿವಾಹವನ್ನು ನೋಂದಾಯಿಸುತ್ತಾರೆ ಎಂದು ಅಪ್ರಾಪ್ತೆಯ ತಾಯಿ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ