ಬೆಂಗಳೂರಿನಲ್ಲಿ ಯುವತಿ ಅಕ್ರಮ ಬಂಧನ – ಬಂಧಮುಕ್ತಗೊಳಿಸಲು ಸುಪ್ರೀಂ ಆದೇಶ
ನವದೆಹಲಿ: ಬೆಂಗಳೂರಿನಲ್ಲಿ ಯುವತಿಯೊಬ್ಬಳನ್ನು ಆಕೆಯ ಪಾಲಕರೇ ಕೂಡಿ ಹಾಕಿರುವುದು ಕಾನೂನು ಬಾಹಿರವಾಗಿದ್ದು ಇನ್ನು ಎರಡು ದಿನಗಳ ಒಳಗಾಗಿ ಆಕೆಯನ್ನು ಬಂಧಮುಕ್ತಗೊಳಿಸಬೇಕೆಂದು ಸುಪ್ರೀಂಕೋರ್ಟ್ ಗುರುವಾರ ಆದೇಶ ಹೊರಡಿಸಿದೆ.
ದುಬೈನಲ್ಲಿ ನೆಲೆಸಿರುವ ಈ ಮಹಿಳೆಯ ಸಹಜೀವನ ಸಂಗಾತಿ ಈ ಕುರಿತು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದು ವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯಾಗಿದೆ. ಈ ಮಹಿಳೆಯನ್ನು ಬಂಧಮುಕ್ತಗೊಳಿಸಬೇಕು ಆಕೆಯ ಪಾಲಕರಿಗೆ ಸೂಚಿಸಿದೆ. ಆಕೆಯ ಸಹಜೀವನ ಸಂಗಾತಿಯ ಪಾಲಕರೊಂದಿಗೆ ಆಕೆ ತೆರಳಲು ಅನುಮತಿ ನೀಡಿದೆ.
ನ್ಯಾಯಮೂರ್ತಿಗಳಾದ ಬಿ,ಆರ್.ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರು ಈ ಅರ್ಜಿ ವಿಚಾರಣೆ ನಡೆಸಿದರು. ಕರ್ನಾಟಕ ಹೈಕೋರ್ಟ್ ಈ ಪ್ರಕರಣದಲ್ಲಿ ಹೊರಡಿಸಿದ್ದ ಆದೇಶದ ಬಗ್ಗೆಯೂ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಹೈಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು 14 ಬಾರಿ ಮುಂದೂಡಿತ್ತು. ಅಲ್ಲದೇ, ವಿಚಾರಣೆಯನ್ನು 2025ಕ್ಕೆ ನಿಗದಿಪಡಿಸಿತ್ತು.
ಮಹಿಳೆಯ ಸಂಗಾತಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ