ರಾಜ್ಯ ವಕೀಲರ ಪರಿಷತ್ತಿಗೆ ಭಾರತೀಯ ವಕೀಲರ ಕೌನ್ಸಿಲ್ ಸೂಚನೆ
ನವ ದೆಹಲಿ: ವಕೀಲರು ಸರ್ಟಿಫಿಕೇಟ್ ಆಫ್ ಪ್ರಾಕ್ಟಿಸಿಂಗ್ ಹಾಗೂ ತಾವು ಸೇವೆ ಸಲ್ಲಿಸುವ ಸ್ಥಳ ಕುರಿತು ಸ್ಪಷ್ಟ ಮಾಹಿತಿಯನ್ನು ಒಳಗೊಂಡಿರುವ ವ್ಯವಸ್ಥೆಯನ್ನು ರೂಪಿಸಬೇಕೆಂದು ಭಾರತೀಯ ವಕೀಲರ ಕೌನ್ಸಿಲ್ ರಾಜ್ಯ ವಕೀಲರ ಪರಿಷತ್ತಿಗೆ ಸುತ್ತೋಲೆ ಕಳುಹಿಸಿದೆ.
ಬಾರ್ ಕೌನ್ಸಿಲ್ ಆಫ್ ಇಂಡಿಯಾ ಜನವರಿ 14 ರಂದು ರಾಜ್ಯ ವಕೀಲರುಗಳ ಪರಿಷತ್ತಿಗೆ ಪತ್ರ ಬರೆದು ಸರ್ಟಿಫಿಕೇಟ್ ಆಫ್ ಪ್ರಾಕ್ಟಿಸ್ಗೆ ಅರ್ಜಿ ಸಲ್ಲಿಸಿದ ನಂತರ ವಕೀಲರು ಯಾವುದೇ ವೃತ್ತಿಪರ ವಲ್ಲದ ಹಾಗೂ ಸ್ವೀಕಾರ್ಹವಲ್ಲದ ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದರೆ ಅಂಥವರ ಬಗ್ಗೆ ರಾಜ್ಯ ವಕೀಲರ ಪರಿಷತ್ ಹೆಚ್ಚಿನ ನಿಗಾ ವಹಿಸಬೇಕು ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಕಾರ್ಯದರ್ಶಿ ಶ್ರೀಮಂತೋಸೇನ್ ಅವರು ತಮ್ಮ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ವಕೀಲರು ತಮ್ಮ ಸರ್ಟಿಫಿಕೇಟ್ ಆಫ್ ಪ್ರಾಕ್ಟೀಸ್ ಬಗ್ಗೆ ಕೆಲವು ದಾಖಲೆಗಳನ್ನು ಒದಗಿಸಬೇಕಿದೆ. ತಾವು ವಕೀಲ ವೃತ್ತಿಯಲ್ಲಿ ಸಕ್ರಿಯರಾಗಿದ್ದೇವೆ ಎಂಬುದಕ್ಕೆ ತಾವು ಪ್ರತಿನಿಧಿಸಿರುವ ಕನಿಷ್ಠ ಐದು ಪ್ರಕರಣಗಳ ವಕಾಲತ್ತಿನ ದಾಖಲೆಗಳನ್ನು ನೀಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ