ನ್ಯಾಯಾಧೀಶೆಯರ ವಜಾ: ಸುಪ್ರೀಂಕೋರ್ಟ್ ನಲ್ಲಿ ದಾವೆ
ನವದೆಹಲಿ: ಮಧ್ಯಪ್ರದೇಶ ಸರಕಾರ ಆರು ಮಂದಿ ನ್ಯಾಯಾಧೀಶೆಯರನ್ನು ಅವರ ಸೇವಾ ಕಾರ್ಯನಿರ್ವಹಣೆ ತೃಪ್ತಿಕರವಾಗಿಲ್ಲ ಎಂದು ಸೇವೆಯಿಂದ ವಜಾಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.
ಮೂವರು ಮಾಜಿ ನ್ಯಾಯಾಧೀಶೆಯರು ಈ ಕುರಿತು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಸ್ವೀಕರಿಸಿ ರಿಟ್ ಅರ್ಜಿಯನ್ನಾಗಿ ಪರಿಗಣಿಸಲು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಸಂಜಯ್ ಕರೋಲ್ ಅವರನ್ನು ಒಳಗೊಂಡಿರುವ ನ್ಯಾಯಪೀಠವು ತೀರ್ಮಾನಿಸಿದೆ.
ಮಧ್ಯಪ್ರದೇಶ ಸರಕಾರದ ಕಾನೂನು ಇಲಾಖೆಯು ಈ ಆರು ಮಂದಿ ನ್ಯಾಯಾಧೀಶೆಯರು ಪ್ರೊಬೆಷನರಿ ವೇಳೆಯಲ್ಲಿ ನಿರ್ವಹಿಸಿದ ಕಾರ್ಯವು ತೃಪ್ತಿಕರವಾಗಿಲ್ಲ ಎಂದು ಕಳೆದ ವರ್ಷ ಜೂನ್ ನಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿತ್ತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ