ಕೋರ್ಟ್ ನಲ್ಲಿ ಮದ್ಯದ ಬಾಟಲಿ ಪ್ರದರ್ಶಿಸಿದ ವಕೀಲ!
ನವದೆಹಲಿ : ಅದು ಎರಡು ಸಂಸ್ಥೆಗಳ ನಡುವಿನ ವ್ಯಾಜ್ಯ. ಟ್ರೇಡ್ ಮಾರ್ಕ್ ಉಲ್ಲಂಘನೆಯ ಪ್ರಕರಣ. ವಾದ ಮಾಡುತ್ತಿದ್ದ ವಕೀಲರು ನ್ಯಾಯಾಲಯದ ಅನುಮತಿ ಪಡೆದು ಮದ್ಯದ ಎರಡು ಬಾಟಲಿಗಳನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮುಂದೆಯೇ ತಂದಿಟ್ಟರು!
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಟ್ರೇಡ್
ಮಾರ್ಕ್ ಉಲ್ಲಂಘನೆಯ ಪ್ರಕರಣವೊಂದರ ಅರ್ಜಿ ಆಲಿಸುತ್ತಿದ್ದರು. ಆಗ ಈ ಪ್ರಸಂಗ ಸಂಭವಿಸಿತು.
ಮುಖ್ಯ ನ್ಯಾಯಮೂರ್ತಿಗಳ ಅನುಮತಿ ಪಡೆದು ವಕೀಲ ಮುಕುಲ್ ರೋಹಗಿ ಅವರು ನ್ಯಾಯಪೀಠದ ಮುಂದೆ ಮದ್ಯದ ಎರಡು ಬಾಟಲಿಗಳನ್ನು ತಂದಿಟ್ಟರು.
ವಿಚಾರಣೆ ಬಳಿಕ ಈ ಬಾಟಲಿಗಳನ್ನು ನಾನು ಒಯ್ಯಬಹುದೇ ಎಂದು ವಕೀಲರು ಕೇಳಿದಾಗ ಮುಖ್ಯ
ನ್ಯಾಯಮೂರ್ತಿಗಳು ನಗುತ್ತಾ, ದಯವಿಟ್ಟು ತೆಗೆದುಕೊಂಡು ಹೋಗಿ ಎಂದು ಹೇಳಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ