ತಮಿಳುನಾಡು ಸಚಿವ ವಜಾ ಪ್ರಕರಣ ರಾಜ್ಯಪಾಲರ ಕ್ರಮಕ್ಕೆ ಆಕ್ಷೇಪ
ನವದೆಹಲಿ : ತಮಿಳುನಾಡಿನಲ್ಲಿ ಅಲ್ಲಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಾಗೂ ರಾಜ್ಯಪಾಲ ಆರ್.ಎನ್.ರವಿ ಅವರ ನಡುವೆ ಸಂಘಷ ಕ್ಕೆ ಕಾರಣವಾಗಿರುವ ಸಚಿವರೊಬ್ಬರ ವಜಾ ಪ್ರಕರಣದಲ್ಲಿ ಸುಪ್ರೀಂಕೋಟ್ ಶುಕ್ರವಾರ ಮಹತ್ವದ ತೀಪು ನೀಡಿದೆ.
ಭ್ರಷ್ಟಾಚಾರದ ಆರೋಪದಲ್ಲಿ ಸಚಿವ ವಿ.ಸೆಂಥಿಲ್ ಬಾಲಾಜಿ ಅವರನ್ನು ಕಳೆದ ವಷ ಜಾರಿ ನಿದೇ ಶನಾಲಯ ಬಂಧಿಸಿದ ನಂತರ ರಾಜ್ಯಪಾಲ ರವಿ ಅವರು ಸೆಂಥಿಲ್ ಬಾಲಾಜಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ್ದರು. ಆಗ ರಾಜ್ಯಪಾಲರ ಈ ಕ್ರಮಕ್ಕೆ ಮುಖ್ಯಮಂತ್ರಿ ಸ್ಟಾಲಿನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ನಂತರ ರಾಜ್ಯಪಾಲರು ತಮ್ಮ ಆದೇಶವನ್ನು ಅಮಾನತ್ತಿನಲ್ಲಿಟ್ಟಿದ್ದರು.
ಭ್ರಷ್ಟಾಚಾರದ ಆರೋಪದಲ್ಲಿ ಬಂಧಿತರಾಗಿರುವ ಸಚಿವ ರವಿ ಅವರನ್ನು ಸಚಿವ ಸ್ಥಾನದಲ್ಲಿ ಮುಂದುವರಿಸಬಾರದು ಎಂದು ಕೋರಿ ಮದ್ರಾಸ್ ಹೈಕೋಟ್ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅಜಿ ದಾರರು ಸುಪ್ರೀಂಕೋಟ್ ಮೊರೆ ಹೋಗಿದ್ದರು. ಈ ಅಜಿ ಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋಟ್ ನಿರಾಕರಿಸಿದೆ.
ರಾಜ್ಯಪಾಲರು ಯಾವುದೇ ಸಚಿವರ ಸ್ಥಾನವನ್ನು ಹಿಂಪಡೆಯುವಾಗ ಮುಖ್ಯಮಂತ್ರಿಗೆ ತಿಳಿಸಿಯೇ ಆ ನಿರ್ಧಾರ ಕೈಗೊಳ್ಳಬೇಕು. ಏಕಪಕ್ಷೀಯ ತೀರ್ಮಾನ ಸಲ್ಲದು. ತಮಿಳುನಾಡಿನ ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ತಮ್ಮ ಒಪ್ಪಿಗೆಯನ್ನೇ ನೀಡಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ