ನ್ಯಾಯಾಧೀಶರ ಸ್ಥಳ ನಿಯುಕ್ತಿಗೆ ಸಾಫ್ಟವೇರ್ ಬಳಕೆ
ಅಲಹಾಬಾದ್: ಉತ್ತರಪ್ರದೇಶದಲ್ಲಿ ಹೊಸದಾಗಿ ನೇಮಕವಾಗಿರುವ 225 ಸಿವಿಲ್ ನ್ಯಾಯಾಧೀಶರನ್ನು (ಜೂನಿಯರ್ ವಿಭಾಗ) ಇದೇ ಮೊದಲ ಬಾರಿಗೆ ಸಾಫ್ಟವೇರ್ ಪ್ರೋಗ್ರಾಂ ಬಳಸಿ ವಿವಿಧ ಜಿಲ್ಲೆಗಳಿಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ .
ಅಲಹಾಬಾದ್ ಹೈಕೋರ್ಟ್ ರಿಜಿಸ್ಟ್ರಾರ್ ಅವರು ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಸಿವಿಲ್ ನ್ಯಾಯಾಧೀಶರನ್ನು ಆಟೋಮ್ಯಾಟಿಕ್ ಡಿಸ್ಟ್ರಿಕ್ಟ್ ಅಲೋಕೇಷನ್ ಸಿಸ್ಟಂ ಸ್ಪಾಫ್ಟವೇರ್ ಪ್ರೋಗ್ರಾಂ ಬಳಸಿ ಜಿಲ್ಲೆಗಳಿಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ. ನ್ಯಾಯಾಧೀಶರನ್ನು ವಿವಿಧ ಜಿಲ್ಲೆಗಳಿಗೆ ನೇಮಿಸುವಾಗ ಮನುಷ್ಯರ ಹಸ್ತಕ್ಷೇಪ ಇರಬಾರದು ಎಂಬ ಕಾರಣಕ್ಕೆ ಸಾಫ್ಟವೇರ್ ಪ್ರೋಗ್ರಾಂ ಬಳಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ