23/12/2024

Law Guide Kannada

Online Guide

ಹಿಮಾಚಲಪ್ರದೇಶ ಡಿಜಿಪಿ ಹುದ್ದೆ – ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

ನವದೆಹಲಿ: ಹಿಮಾಚಲಪ್ರದೇಶದ  ಪೊಲೀಸ್‌ ಮಹಾನಿರ್ದೇಶಕರ ಹುದ್ದೆಯಿಂದ ತೆಗೆದು ಹಾಕಿದ ಹಿಮಾಚಲ ಪ್ರದೇಶ ಹೈಕೋರ್ಟ್‌ ತೀರ್ಪಿಗೆ  ಸುಪ್ರೀಂಕೋರ್ಟ್‌ ಬುಧವಾರ ತಡೆಯಾಜ್ಞೆ  ನೀಡಿದೆ.

ಹಿಮಾಚಲಪ್ರದೇಶದ  ಪೊಲೀಸ್‌ ಮಹಾನಿರ್ದೇಶಕ ಸಂಜಯ್‌  ಕುಂಡು ಅವರನ್ನು ಈ ಹುದ್ದೆಯಿಂದ ತೆರವುಗೊಳಿಸಿ ಹಿಮಾಚಲಪ್ರದೇಶ ಹೈಕೋರ್ಟ್ ಆದೇಶಿಸಿತ್ತು. ಇದಾದ ನಂತರ ರಾಜ್ಯ ಸರಕಾರ ಸಂಜಯ್‌ ಕುಂಡು ಅವರನ್ನು ಆಯುಷ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ವರ್ಗಾಯಿಸಿತ್ತು. ರಾಜ್ಯ ಸರಕಾರದ ಆದೇಶಕ್ಕೂ ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿದೆ.

ಮುಕುಲ್‌ ರೋಹಟಗಿ ಅವರು ಅರ್ಜಿದಾರರ ಪರ ವಾದ ಮಂಡಿಸಿ  ತಮ್ಮ ಕಕ್ಷಿದಾರರಾದ ಸಂಜಯ್‌ ಕುಂಡು ಅವರ  ಅನಿಸಿಕೆಯನ್ನು ಕೇಳದೇ ಹೈಕೋರ್ಟ್‌ ಆದೇಶ ಹೊರಡಿಸಿದೆ. ಸಂಜಯ್‌ ಕುಂಡು ಅವರು ಈವರೆಗೂ ಕಳಂಕ ರಹಿತ ಸೇವೆಯನ್ನು ಸಲ್ಲಿಸಿದ್ದಾರೆ ಎಂದರು.

ಕಾಂಗ್ರಾ ಜಿಲ್ಲೆಯ ನಿವಾಸಿಯೊಬ್ಬರು  ಮಾಜಿ ಐಪಿಎಸ್‌  ಅಧಿಕಾರಿಯೊಬ್ಬರು ಹಾಗೂ ವಕೀಲರೊಬ್ಬರಿಂದ ತಮ್ಮ ಜೀವಕ್ಕೆ ಅಪಾಯವಿದೆ  ಎಂದು ದೂರು ನೀಡಿದ್ದರು. ತನಿಖೆಯು ನ್ಯಾಯಯುತವಾಗಿ  ನಡೆಯುವ ಸಾಧ್ಯತೆ ಇಲ್ಲವೆಂದು ಡಿಜಿಪಿ ಸಂಜಯ್‌ ಕುಂಡು ಅವರನ್ನು ಡಿಜಿಪಿ ಹುದ್ದೆಯಿಂದ ತೆರವುಗೊಳಿಸಿ ಹೈಕೋರ್ಟ್ ಆದೇಶಿಸಿತ್ತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.