23/12/2024

Law Guide Kannada

Online Guide

ನೈಸರ್ಗಿಕ ನ್ಯಾಯಕ್ಕೆ ವರದಾನ – Res Gestae ತತ್ವ

Res Gestae
ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಆರೋಪವನ್ನು ಸಾಬೀತುಪಡಿಸುವುದು ಸವಾಲುಗಳಿಂದ ಕೂಡಿರುತ್ತದೆ. ಆರೋಪ ಪುಷ್ಟೀಕರಿಸಲು ಬಳಸುವ ಸಾಕ್ಷ್ಯಗಳನ್ನು Inculpatory Evidence ಎಂಬುದಾಗಿಯೂ ಹಾಗೂ ಆರೋಪ ಅಲ್ಲಗೆಳೆಯಲು ಬಳಸುವ ಸಾಕ್ಷ್ಯಗಳನ್ನು Exculpatory Evidence ಎಂದು ಕರೆಯಲಾಗುತ್ತದೆ. ಸಾಕ್ಷ್ಯದ ಕಾನೂನಿನ ತತ್ವಗಳಲ್ಲಿ Res Gestae ಕೂಡಾ ಒಂದಾಗಿದೆ. Res Gestae ಎಂಬುದು ಲ್ಯಾಟಿನ್ ಮೂಲದ್ದಾಗಿದ್ದು, Res Gestae ಎಂದರೆ ಪ್ರತಿಯೊಂದು ಘಟನೆಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಬಂಧಿತ ಘಟನೆಯ ಭಾಗವಾಗಿರುತ್ತದೆ.
ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಪ್ರಕರಣ ಇತ್ಯಥ9ಗೊಳಿಸುವ ಮೊದಲು ಘಟನಾವಳಿಗಳ ಸರಪಳಿಯಲ್ಲಿನ ಸುಸಂಬದ್ಧ ಸಾಕ್ಷ್ಯದ ಪ್ರತಿಯೊಂದು ಮಜಲುಗಳನ್ನು ಗಣನೆಗೆ ತೆಗೆದುಕೊಳ್ಳಲು ಊಹಿಸುವುದನ್ನು Res Gestae ಸಿದ್ಧಾಂತವು ಆಧರಿಸಿದೆ. ಈ ತತ್ವವು 1963 ರಲ್ಲಿ ಮೊದಲ ಬಾರಿಗೆ Thompson Vs Trevanion ಪ್ರಕರಣದಲ್ಲಿ ಬಳಕೆಯಾಯಿತು. Res Gestae ತತ್ವವನ್ನು ಭಾರತ ಸಾಕ್ಷ್ಯ ಅಧಿನಿಯಮ (ಭಾ.ಸಾ.ಅ) ಕಲಂ 6 ರಲ್ಲಿ ಕಾಣಬಹುದಾಗಿದೆ. ಕೇಳಿದ ಸಾಕ್ಷ್ಯಗಳು ಸ್ವೀಕಾರಾಹ9ವಲ್ಲ ಎಂಬುದಕ್ಕೆ Res Gestae ಅಪವಾದವಾಗಿದೆ.

Res Gestae ಪ್ರಮುಖ ಅಂಶಗಳು:
1. ಸ್ವಾಭಾವಿಕತೆ: ಸಹಜ ಪ್ರತಿಕ್ರಿಯಾತ್ಮಕತೆಯಿಂದ ಕೂಡಿರುವುದು.
2. ತಕ್ಷಣದ ಸಹವತಿ9ತನ: ಘಟನಾ ಸ್ಥಳದಲ್ಲಿ ಘಟನೆಯಾದ ತಕ್ಷಣ ಕಂಡುಬರುವ ವತ9ನೆ
3. ಸಮಕಾಲೀನತೆ: ಘಟನೆಯ ನೈಜತೆ ತಿರುಚಲು ಸಮಯಾವಕಾಶವಿಲ್ಲದಂತೆ ಘಟನೆಯ ಜೊತೆ ಜೊತೆಗೆ ಅಥವಾ ಘಟನೆಯ ನಂತರದ ಕನಿಷ್ಟ ಅವಧಿಯಲ್ಲಿನ ವತ9ನೆಯ ಭಾಗವಾಗಿರುತ್ತದೆ.
4. ಪ್ರತ್ಯೇಕ ಸಾಕ್ಷ್ಯ ಅಗತ್ಯವಿಲ್ಲ: ಪೂರಕ ಸಾಕ್ಷ್ಯಗಳಿಂದ ಸಾಬೀತುಪಡಿಸುವ ಅವಶ್ಯಕತೆಯಿಲ್ಲ..

ಭಾ.ಸಾ.ಅ ಕಲಂ 6 ರ ರೀತ್ಯಾ Res Gestae ಯ ಪೂರಕ ತತ್ವಗಳು:
1. ಮರಣದ ಕಾರಣದ ಬಗ್ಗೆ ಹೇಳಿಕೆಗಳು: ಮರಣದ ಕಾರಣಕ್ಕೆ ಅಥವಾ ಮರಣವಾಗುವ ಸನ್ನಿವೇಶದಲ್ಲಿ ನೀಡಿದ ಹೇಳಿಕೆಗಳು ಸ್ವೀಕಾರಾಹ9 ಸಾಕ್ಷ್ಯಗಳಾಗುತ್ತವೆ.
2. ವಹಿವಾಟು, ವಿಷಯ ಅಥವಾ ಘಟನೆಗೆ ಸಂಬಂಧಿಸಿದ ಹೇಳಿಕೆಗಳು: ಹೇಳಿಕೆ ನೀಡಿದ ವ್ಯಕ್ತಿಯನ್ನು ಸಾಕ್ಷಿಯಾಗಿ ಕರೆಯಲಾಗದಿದ್ದಾಗ ಅಂತಹ ಘಟನೆಗಳಿಗೆ ಸಂಬಂಧಿಸಿದಂತೆ ವ್ಯಕ್ತಿಯು ನೀಡಿದ ಹೇಳಿಕೆಗಳು
3. ಹಕ್ಕುಗಳ ಅಥವಾ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಹೇಳಿಕೆಗಳು: ವ್ಯಕ್ತಿಯ ಅಲಭ್ಯತೆಯಿಂದ ಆತನ ಹಕ್ಕು/ ಆಸಕ್ತಿಗಳ ಮೇಲೆ ಪರಿಣಾಮ ಬೀರುವ ಹೇಳಿಕೆಗಳು ಸ್ವೀಕಾರಾಹ9.
4. Res Gestae ಅಂಶ: ನಿದಿ9ಷ್ಟ ಘಟನೆಯ ತಕ್ಷಣದ ಪ್ರತಿಕ್ರಿಯೆಯ ಭಾಗವಾಗಿರುವ ಹೇಳಿಕೆ ಒಪ್ಪಿಕೊಳ್ಳಲು ಅನುಮತಿಸುತ್ತದೆ.
Res Gestae ಯು ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾದ ಸಾಕ್ಷ್ಯಗಳ ವಿಶ್ವಾಸಾಹ9ತೆಯನ್ನು ಹೆಚ್ಚಿಸುವಲ್ಲಿ ನಿಣಾ9ಯಕ ಪಾತ್ರ ವಹಿಸುತ್ತದೆ. ಯಾವುದೇ ಕುಶಲತೆಗೆ ಅವಕಾಶವಿಲ್ಲದೆ ತಕ್ಷಣದ ಹೇಳಿಕೆಗಳಿಗೆ ಕಾನೂನು ಪ್ರಕ್ರಿಯೆಯಲ್ಲಿ ಮಾನ್ಯತೆ ಹೊಂದಿದ್ದು ಸತ್ಯಾನ್ವೇಷಣೆಗೆ ಸಹಕರಿಸುವುದಲ್ಲದೇ ಸಮಗ್ರತೆಯನ್ನು ಕಾಪಾಡಿಕೊಳ್ಳುತ್ತದೆ.
Res Gestae ಪರೀಕ್ಷೆಗಳು:
1. ಕಾರಣ ಮತ್ತು ಪರಿಣಾಮದ ಸಂಬಂಧವನ್ನು ಹೊಂದಿರುವುದು.
2. ಘಟನಾ ಸ್ಥಳ ಮತ್ತು ಸಮಯದ ಸಾಮೀಪ್ಯ ಹೊಂದಿರುವುದು, ಅಲ್ಲದೇ ಘಟನೆಯ ಭಾಗವಾಗುವಂತಹ ಸಂಬಂಧ ಹೊಂದಿರುವುದು.
3. ಉದ್ದೇಶ ಮತ್ತು ಕ್ರಿಯೆಯ ನಿರಂತರತೆ ಹೊಂದಿರುವುದು.

Res Gestae ಯಿಂದ ವಿನಾಯಿತಿ:
Res Gestae ಹೇಳಿಕೆಯು ಅಸಾಧಾರಣ ಸನ್ನಿವೇಶದಲ್ಲಿ ನೀಡಿದ ಹೇಳಿಕೆಯಾಗಿದ್ದು, ಕೇಳಿಕೆಯ ಹೇಳಿಕೆ (Hear-Say) ಗೆ ಅಪವಾದವಾಗಿದೆ. ಅಂದರೆ, ಕೇಳಿದ ಪುರಾವೆಗಳು ಯಾವುದೇ ಪುರಾವೆಯಲ್ಲ ಎಂಬ ತತ್ವಕ್ಕೆ ಅಪವಾದವಾಗಿದೆ.

ಟೀಕೆ:
ಒಂದು ನಿಯಮದ ಗೊಂದಲವನ್ನು ಇನ್ನೊಂದರ ಜೊತೆ ಆಹ್ವಾನಿಸುತ್ತದೆ ಎಂಬುದಾಗಿದೆ.

Res Gestae ಸಂಬಂಧಿತ ಘನ ಸವೋಚ್ಛ9 ನ್ಯಾಯಾಲಯದ ಮಹತ್ವಪೂಣ9 ತೀಪು9ಗಳು:
1. ವಾಸಾ ಚಂದ್ರಶೇಖರ್ ರಾವ್ ವಿರುದ್ಧ ಹೊನ್ನ ಸತ್ಯನಾರಾಯಣ ಮತ್ತು ಇತರರು ದಿನಾಂಕ 05-05-2000.
ಸಾಕ್ಷಿಯ ಹೇಳಿಕೆ ಕೃತ್ಯ ನಡೆದ ಸಮಯದಲ್ಲಿ ಅಥವಾ ಕೃತ್ಯದ ನಂತರ ತಕ್ಷಣದ ಹೇಳಿಕೆ ಎಂಬುದನ್ನು ಸಾಬೀತುಪಡಿಸಲು ವಿಫಲರಾಗಿರುವ ಕಾರಣ Res Gestae ಯ ವ್ಯಾಪ್ತಿಗೆ ಒಳಪಡುವುದಿಲ್ಲ
2. ಬೀಷ್ಣಾ @ ಬಿಸ್ವದೇಬ್ ಮಹತೋ ಮತ್ತು ಇತರರು ವಿರುದ್ಧ ಸ್ಟೇಟ್ ಆಫ್ ವೆಸ್ಟ್ ಬೆಂಗಾಲ್ ದಿನಾಂಕ 28-05-2005.
ಕೃತ್ಯ ನಡೆದ ತಕ್ಷಣ ಇಬ್ಬರು ಸಾಕ್ಷಿಗಳು ಕೃತ್ಯ ನಡೆದ ಸ್ಥಳಕ್ಕೆ ತೆರಳುತ್ತಾರೆ. ಅಲ್ಲಿದ್ದು ಕೃತ್ಯವನ್ನು ಕಣ್ಣಾರೆ ಕಂಡ ಮೃತನ ಸಂಬಂಧಿಯಿಂದ ಕೃತ್ಯದ ಬಗ್ಗೆ ಮಾಹಿತಿ ಪಡೆದ ಸಾಕ್ಷ್ಯವು ಸ್ವೀಕಾರಾಹ9ವಾಗುತ್ತದೆ.
ಅಂತಿಮವಾಗಿ Res Gestae ಯೆಂಬ ತತ್ವವು ನೈಸಗಿ9ಕ ನ್ಯಾಯದಾನಕ್ಕೆ ಪೂರಕವಾಗಿದೆ. ಇದು ಕೃತ್ಯದ ಸಮಯದಲ್ಲಿ ಅಥವಾ ಕೃತ್ಯದ ನಂತರದಲ್ಲಿನ ತಕ್ಷಣದ ವತ9ನೆ, ಹೇಳಿಕೆಗಳಿಗೆ ಅನ್ವಯಿಸುವ ಇತಿ-ಮಿತಿಯನ್ನು ಹೊಂದಿರುತ್ತದೆ. ಇಂತಹ ವತ9ನೆ, ಹೇಳಿಕೆ ಸುಸಂಬದ್ಧ ಸಂಗತಿಗೆ ಹೊಂದಿಕೊಂಡಿದ್ದು ಸಂಗತಿಯ ಭಾಗವಾಗಿರುತ್ತದೆ. ಈ ತತ್ವವನ್ನು ಅನಿಯಮಿತ ವ್ಯಾಪ್ತಿಗೆ ಅನ್ವಯಿಸುವುದಿಲ್ಲ. ಭಾ.ಸಾ.ಅ ಕಲಂ 6 ರೀತ್ಯಾ ಸ್ವೀಕಾರಾಹ9ವಾಗದ ಹೇಳಿಕೆಗಳನ್ನು ಪೂರಕ ಸಾಕ್ಷ್ಯಗಳೊಂದಿಗೆ ಕಲಂ 157 ರಂತೆ ಸ್ವೀಕಾರಾಹ9ಗೊಳಿಸಬಹುದಾಗಿದೆ.

Copyright © All rights reserved. | Newsphere by AF themes.