ಸೈಬರ್ ವಂಚನೆಯಿಂದ ಗ್ರಾಹಕರಿಗಾಗುವ ನಷ್ಟಕ್ಕೆ ಬ್ಯಾಂಕ್ ಗಳೇ ಹೊಣೆ: ಸುಪ್ರೀಂಕೋರ್ಟ್
ನವವದೆಹಲಿ : ತಂತ್ರಜ್ಞಾನ ಬೆಳೆದಂತೆ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಅದರಲ್ಲೂ ಇತ್ತೀಚೆಗೆ ನಡೆಯುತ್ತಿರುವ ಸೈಬರ್ ವಂಚನೆಗಳಂತೂ ಸಾಕಷ್ಟು ಆತಂಕವನ್ನುಂಟು ಮಾಡಿದೆ. ಆನ್ ಲೈನ್ ವಹಿವಾಟು ನಡೆಸುವಾಗ ವಂಚನೆಗೊಳಗಾಗಿ ಹಲವು ಮಂದಿ ತನ್ನ ಖಾತೆಯಲ್ಲಿದ್ದ ಹಣವನ್ನ ಕಳೆದುಕೊಂಡ ಸಾಕಷ್ಟು ಉದಹಾರಣೆಗಳಿವೆ. ಅಂತೆಯೇ ಇಲ್ಲೊಬ್ಬ ಗ್ರಾಹಕ ಆನ್ ಲೈನ್ ನಲ್ಲಿ ವಸ್ತುವೊಂದನ್ನು ಖರೀದಿಸಿದಾಗ ಸೈಬರ್ ಚೋರರು ಆತನ ಖಾತೆಗೆ ಕನ್ನ ಹಾಕಿದ್ದಾರೆ. ತನ್ನ ಮನವಿಯನ್ನ ಸ್ವೀಕರಿಸದ ಬ್ಯಾಕ್ ವಿರುದ್ದ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಗ್ರಾಹಕ ಪ್ರಕರಣದಲ್ಲಿ ಜಯ ಸಾಧಿಸಿದ್ದಾರೆ.
ಹೌದು, ಸೈಬರ್ ವಂಚನೆ ಪ್ರಕರಣದಲ್ಲಿ ಗ್ರಾಹಕನ ಖಾತೆಯಲ್ಲಿ ಅನಧಿಕೃತ ವಹಿವಾಟು ನಡೆದು ನಷ್ಟ ಸಂಭವಿಸಿದ್ರೆ ಅದಕ್ಕೆ ಬ್ಯಾಂಕುಗಳೇ ಹೊಣೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಸ್ಸಾಂನ ಸೈಬರ್ ವಂಚನೆಗೆ ಒಳಗಾದ ಪಲ್ಲಬ್ ಭೌಮಿಕ್ ಗೆ 94,000 ರೂ.ಗಳನ್ನು ಮರುಪಾವತಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗೆ ನಿರ್ದೇಶಿಸಿದೆ.
ಗ್ರಾಹಕನ ಹಿತಾಸಕ್ತಿ ಕಾಪಾಡುವುದು ಬ್ಯಾಂಕ್ ಗಳ ಕರ್ತವ್ಯ. ಸೈಬರ್ ವಂಚನೆ ವೇಳೆ ಗ್ರಾಹಕ ಖಾತೆಯಲ್ಲಿ ನಡೆಯುವ ವಹಿವಾಟಿಗೆ ಬ್ಯಾಂಕ್ ಗಳೇ ಹೊಣೆಗಾರಿಕೆಯನ್ನ ವಹಿಸಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಪ್ರಕರಣದ ಹಿನ್ನೆಲೆ
ಅಸ್ಸಾಂ ಮೂಲದ ವ್ಯಕ್ತಿ ಪಲ್ಲಭ್ ಭೌಮಿಕ್ ಎನ್ನುವವರು ಆನ್ ಲೈನ್ ಮೂಲಕ ಲೂಯಿಸ್ ಫಿಲಿಪ್ ಬ್ಲೇಜರ್ ಖರೀದಿಸಿದ್ದರು. 4,000 ರೂ. ಮೌಲ್ಯದ ಲೂಯಿಸ್ ಫಿಲಿಪ್ ಬ್ಲೇಜರ್ ಅನ್ನು ಹಿಂದಿರುಗಿಸಲು ಮುಂದಾಗಿದ್ದು ಈ ವೇಳೆ ಸೈಬರ್ ವಂಚನೆ ನಡೆದಿದೆ. ಗ್ರಾಹಕ ಸೇವಾ ಪ್ರತಿನಿಧಿಯಾಗಿ ನಟಿಸಿ ಗ್ರಾಹಕ ಪಲ್ಲಬ್ ಭೌಮಿಕ್ ಗೆ ಸೈಬರ್ ಚೋರರು ವಂಚಿಸಿದ್ದಾರೆ.
ಅವರ SಃI ಉಳಿತಾಯ ಖಾತೆಯಿಂದ 94,204 ರೂ.ಗಳನ್ನು ದೋಚಿದ್ದು. ಕದ್ದ ಹಣವನ್ನು UPI ವಹಿವಾಟುಗಳ ಮೂಲಕ ಬಹು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ.
ಸಮಸ್ಯೆಯ ಮೂಲ ಲೂಯಿಸ್ ಫಿಲಿಪ್ ಅವರ ವೆಬ್ಸೈಟ್ ನಲ್ಲಿ 2021 ರಲ್ಲಿ ನಡೆದ ಡೇಟಾ ಉಲ್ಲಂಘನೆಯಾಗಿದ್ದು, ಇದು ಬಲಿಪಶುವಿನ ಸಂಪರ್ಕ ಮಾಹಿತಿ ಸೇರಿದಂತೆ ಸೂಕ್ಷ್ಮ ಗ್ರಾಹಕರ ವಿವರಗಳನ್ನು ರಾಜಿ ಮಾಡಿತು. ಈ ಡೇಟಾವನ್ನು ದುರುಪಯೋಗಪಡಿಸಿಕೊಂಡು, ವಂಚಕನು ವಂಚನೆಯನ್ನು ನಡೆಸಿದ್ದಾನೆ. ವಂಚನೆಯ ವಹಿವಾಟುಗಳನ್ನು ಪತ್ತೆಹಚ್ಚಿದ ನಂತರ, ಪಲ್ಲಭ್ ಭೌಮಿಕ್ ತಕ್ಷಣವೇ ತನ್ನ ಖಾತೆ ಮತ್ತು ಕಾರ್ಡ್ ಅನ್ನು ನಿರ್ಬಂಧಿಸಲು SBI ಅನ್ನು ಸಂಪರ್ಕಿಸಿದ್ದಾರೆ. ನಂತರ ಅವರು ಅಸ್ಸಾಂ ಪೊಲೀಸ್, ಖಃI ಬ್ಯಾಂಕಿಂಗ್ ಒಂಬುಡ್ಸ್ಮನ್ ಮತ್ತು ಗೃಹ ಸಚಿವಾಲಯಕ್ಕೆ ಅದರ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ ಮೂಲಕ ದೂರುಗಳನ್ನು ಸಲ್ಲಿಸಿದ್ದಾರೆ. ಆದಾಗ್ಯೂ, ಬ್ಯಾಂಕ್ ಶಿಫಾರಸು ಮಾಡದ ಮೂರನೇ ವ್ಯಕ್ತಿಯ ಅಪ್ಲಿಕೇಶನ್ Google Pay ಬಳಕೆಯನ್ನು ಉಲ್ಲೇಖಿಸಿ ಜವಾಬ್ದಾರಿಯನ್ನು ತೆಗೆದುಕೊಳ್ಳಲು SಃI ನಿರಾಕರಿಸಿತ್ತು. ಇದು ನಮ್ಮೀದಾದ ತಪ್ಪಲ್ಲ ಹಾಗಾಗಿ ಹಣ ಹಿಂದಿರುಗಿಸುವುದಿಲ್ಲ ಎಂದಿತ್ತು.
ಇದನ್ನು ಪ್ರಶ್ನಿಸಿ ವ್ಯಕ್ತಿ ಅಸ್ಸಾಂ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಈ ವೇಳೆ ಕೋರ್ಟ್ ಸಂತ್ರಸ್ತ ವ್ಯಕ್ತಿ ಪರ ತೀರ್ಪು ನೀಡಿ ಹಣ ಮರುಪಾವತಿಸುವಂತೆ ಎಸ್ ಬಿಐಗೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಎಸ್ ಬಿಐ ಮನವಿ ಸಲ್ಲಿಸಿತ್ತು. ಇದನ್ನ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸಹ ಗ್ರಾಹಕನ ಪರ ತೀರ್ಪು ನೀಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ