26/12/2024

Law Guide Kannada

Online Guide

ಮಹಿಳಾ ವಕೀಲೆಯರು ಮುಖ ಮರೆಮಾಚಿ ನ್ಯಾಯಾಲಯದ ಮುಂದೆ ಹಾಜರಾಗುವಂತಿಲ್ಲ – ಹೈಕೋರ್ಟ್

ಜಮ್ಮುಕಾಶ್ಮೀರ: ಕೆಲ ವ್ಯಾಜ್ಯಗಳನ್ನು ಪ್ರತಿನಿಧಿಸುವ ವಕೀಲರೆಂದು ಹೇಳಿಕೊಂಡಿದ್ದ ಮಹಿಳಾ ವಕೀಲರು ‘ಮುಖದ ಹೊದಿಕೆ ತೆಗೆಯಬೇಕು’ ಎಂಬ ನ್ಯಾಯಾಲಯದ ಸೂಚನೆಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಮಹಿಳಾ ವಕೀಲೆಯರು ಮುಖ ಮರೆಮಾಚಿ ನ್ಯಾಯಾಲಯದ ಮುಂದೆ ಹಾಜರಾಗುವಂತಿಲ್ಲ ಎಂದು ಎಂದು ಕಾಶ್ಮೀರ ಮತ್ತು ಲಡಾಕ್ ಹೈಕೋರ್ಟ್ ತಿಳಿಸಿದೆ ವಕೀಲರ ವಸ್ತ್ರ ಸಂಹಿತೆಗೆ ಸಂಬಂಧಿಸಿದ ಭಾರತೀಯ ವಕೀಲರ ಪರಿಷತ್ತಿನ ಬಿಸಿಐ ನಿಯಮಾವಳಿಗಳು ಮಹಿಳಾ ವಕೀಲರನ್ನು ಮುಖಮರೆ ಮಾಚಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಹೇಳುವುದಿಲ್ಲ. ಹೀಗಾಗಿ ಮಹಿಳಾ ವಕೀಲೆಯರು ಮುಖ ಮರೆಮಾಚಿ ಕೋರ್ಟ್ ಮುಂದೆ ಹಾಜರಾಗುವಂತಿಲ್ಲ ಎಂದು ಕಾಶ್ಮೀರ ಮತ್ತು ಲಡಾಕ್ ಹೈಕೋರ್ಟ್ ತಿಳಿಸಿದೆ.

ನಿಯಮಗಳು ಮಹಿಳಾ ವಕೀಲರು ಮುಖ ಮುಚ್ಚಿಕೊಂಡು ಹಾಜರಾಗಲು ಅವಕಾಶ ನೀಡುತ್ತದೆಯೋ ಎಂಬ ಬಗ್ಗೆ ರಿಜಿಸ್ಟರ್ ಜನರಲ್ ವರದಿ ಪಡೆದು ಪರಿಶೀಲಿಸಿದ ಬಳಿಕ, ನ್ಯಾಯಮೂರ್ತಿ ಮೋಕ್ಷ ಖಜೂರಿಯ ಕಾಳ್ಮೆ ಅವರು ಬಿಸಿಐ ಸೂಚಿಸಿದ ನಿಯಮಗಳಲ್ಲಿ ಈ ಬಗ್ಗೆ ಯಾವುದೇ ಉಲ್ಲೇಖ ಇಲ್ಲ ಎಂದು ಸ್ಪಷ್ಟಪಡಿಸಿದೆ. ಮಹಿಳಾ ವಕೀಲರ ವಸ್ತ್ರ ಸಂಹಿತೆ ಕುರಿತು ಹೇಳುವ ಬಿಸಿಐ ನಿಯಮಾವಳಿ ಅಧ್ಯಾಯ ನಾಲ್ಕು ಭಾಗ ಆರು ಸೆಕ್ಷನ್ 49 ಇದನ್ನು ಪ್ರಸ್ತಾಪಿಸಿದ ನ್ಯಾಯಪೀಠ, ಈ ನ್ಯಾಯಾಲಯಕ್ಕೆ ಹಾಜರಾಗುವ ಅಂತಹ ಉಡುಗೆ ಧರಿಸಲು ಅನುಮತಿ ಇದೆ ಎಂದು ಎಲ್ಲೂ ನಿಯಮಾವಳಿಗಳಲ್ಲಿ ತಿಳಿಸಿಲ್ಲ. ಆದರೆ ವ್ಯಾಜ್ಯ ಪ್ರಕರಣದಲ್ಲಿ ಹಾಜರಾಗಿದ್ದ ಮಹಿಳಾ ವಕೀಲರು ನ್ಯಾಯಾಲಯಕ್ಕೆ ಹಾಜರಾಗದೆ ಇರಲು ನಿರ್ಧರಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ವಿಚಾರವನ್ನು ವಿವರವಾಗಿ ಪರಿಶೀಲಿಸದೆ ಕೈಬಿಟ್ಟಿತು.

ಕೌಟುಂಬಿಕ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನವಂಬರ್ 27ರಂದು ಸೈಯದ್ ಐನೈನ್ ಖಾದ್ರಿ ಹೆಸರಿನ ಮಹಿಳಾ ವಕೀಲರು ಎಂದು ತಮ್ಮನ್ನು ಗುರುತಿಸಿಕೊಂಡ ವ್ಯಕ್ತಿಯೊಬ್ಬರು ಮುಖ ಮರೆಮಾಚಿ ನ್ಯಾಯಾಲಯಕ್ಕೆ ಹಾಜರಾದರು. ಈ ಸಮಯದಲ್ಲಿ ಪ್ರಕರಣವು ನ್ಯಾಯಮೂರ್ತಿ ರಾಹುಲ್ ಭಾರ್ತಿ ಅವರ ನ್ಯಾಯಪೀಠದ ಮುಂದೆ ಇತ್ತು. ಮುಖ ಮುಚ್ಚಿಕೊಂಡು ಹಾಜರಾಗುವುದು ತನ್ನ ಮೂಲಭೂತ ಹಕ್ಕು ಮತ್ತು ಮುಖ ಮುಚ್ಚಿರುವುದನ್ನು ತೆಗೆಯುವಂತೆ ನ್ಯಾಯಾಲಯ ಒತ್ತಾಯಿಸುವಂತಿಲ್ಲ ಎಂದು ಆ ಮಹಿಳಾ ವಕೀಲರು ಆ ಸಂದರ್ಭದಲ್ಲಿ ನ್ಯಾಯಪೀಠಕ್ಕೆ ತಿಳಿಸಿದ್ದರು.

ಆದರೆ ಆಕೆ ಯಾರು ಎಂದು ದೃಢೀಕರಿಸಲು ಸಾಧ್ಯವಾಗದ ಕಾರಣ, ಆ ದಿನ ಅರ್ಜಿದಾರರ ಪರ ವಕೀಲರಾಗಿ ಹಾಜರಾಗಲು ಆ ವ್ಯಕ್ತಿಗೆ ನ್ಯಾಯಾಲಯ ಅವಕಾಶ ನೀಡಲಿಲ್ಲ. ಪ್ರಕರಣವನ್ನು ಮುಂದಕ್ಕೆ ಹಾಕಿದ್ದ ನ್ಯಾಯಾಲಯದ ಆದೇಶದಂತೆ ಬಿಸಿಐ ನಿಯಮಾವಳಿ ಕುರಿತು ರಿಜಿಸ್ಟರ್ ಜನರಲ್ ಹೈಕೋರ್ಟ್ ನ್ಯಾಯ ಪೀಠಕ್ಕೆ ವಿಸ್ತ್ರತ ವರದಿ ಸಲ್ಲಿಸಿದರು. ಈ ಘಟನೆಯ ನಂತರ ಮತ್ತೊಬ್ಬ ವಕೀಲರು ಅರ್ಜಿದಾರರನ್ನು ಪ್ರತಿನಿಧಿಸಲು ಮುಂದಾದರು. ಅವರ ವಾದ ಆಲಿಸಿದ ನ್ಯಾಯಾಲಯ ಪರ್ಯಾಯ ಪರಿಹಾರ ಇದೆ ಎನ್ನುವುದನ್ನು ಕಂಡು ಕೊಂಡ ನಂತರ ಸದರಿ ಅರ್ಜಿಯನ್ನು ವಜಾಗೊಳಿಸಿತ್ತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.