25/12/2024

Law Guide Kannada

Online Guide

ನ್ಯಾಯಾಂಗದಲ್ಲಿ ಜನರಿಗೆ ನಂಬಿಕೆ ಇದೆ: ಹುದ್ದೆಯ ಘನತೆ ಗೌರವ ಕಾಪಾಡಿ- ಹೈಕೋರ್ಟ್ ಜಡ್ಜ್ ಗೆ ಸುಪ್ರೀಂ ಎಚ್ಚರಿಕೆ

ನವದೆಹಲಿ: ಕಾರ್ಯಕ್ರಮವೊಂದರಲ್ಲಿ ಮುಸ್ಲಿಮರ ಬಗ್ಗೆ ವಿವಾದಾತ್ಮಕ ಭಾಷಣ ಮಾಡಿದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಕೆ ಯಾದವ್ ಅವರಿಗೆ ತರಾಟೆ ತೆಗೆದುಕೊಂಡ ಸುಪ್ರೀಂಕೋರ್ಟ್ ಕೊಲಿಜಿಯಂ, ನ್ಯಾಯಾಂಗದಲ್ಲಿ ಜನರಿಗೆ ನಂಬಿಕೆ ಇದೆ. ಹೀಗಾಗಿ ಹೈಕೋರ್ಟ್ ನ್ಯಾಯಾಧೀಶರು ತಮ್ಮ ಗೌರವ ಮತ್ತು ತಮ್ಮ ಹುದ್ದೆಯ ಘನತೆಯನ್ನು ಕಾಪಾಡಿಕೊಳ್ಳಬೇಕು ಎಚ್ಚರಿಕೆ ನೀಡಿದೆ.

ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಶ್ರೀ ಸಂಜೀವ್ ಖನ್ನ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್. ಬಿ ಆರ್ ಗವಾಯಿ, ರಿಷಿಕೇಶ್ ರಾಯ್ ಹಾಗೂ ಅಭಯ ಶ್ರೀನಿವಾಸ್ ಅವರನ್ನೊಳಗೊಂಡ ಕೊಲೀಜಿಯಂ ನ್ಯಾಯಮೂರ್ತಿ ಎಸ್ ಕೆ ಯಾದವ್ ಗೆ ಈ ಎಚ್ಚರಿಕೆ ನೀಡಿದೆ.

ಏಕರೂಪ ನಾಗರಿಕ ಸಂಹಿತೆ ಕುರಿತಂತೆ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಕೆ ಯಾದವ್ ಅವರು ವಿಶ್ವ ಹಿಂದೂ ಪರಿಷತ್ ಕಾನೂನು ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದ ವೇಳೆ ಮಾತನಾಡಿದ್ದ ನ್ಯಾಯಮೂರ್ತಿ ಎಸ್ ಕೆ ಯಾದವ್ , ಬಹುಸಂಖ್ಯಾತರ ಆಶಯದಂತೆ ಭಾರತ ಕೆಲಸ ಮಾಡಲಿದೆ ಎಂದು ಹೇಳಿದ್ದಲ್ಲದೇ ಮುಸ್ಲಿಮರ ವಿರುದ್ಧ ಅವಹೇಳನಕಾರಿಯಾದ ಕರ್ಮಲ್ಲ ಎಂಬ ಪದ ಕೂಡ ಬಳಸಿದ್ದರು.

ಈ ಘಟನೆ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿ ಆನಂತರ ಸುಪ್ರೀಂ ಕೋರ್ಟ್ ಹುಲಿ ಜಿಎಂ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಸಮನ್ಸ್ ನೀಡಿತ್ತು. ಕೊಲೀಜಿಯಂ ಮುಂದೆ ಹಾಜರಾಗಿ ತಮ್ಮ ನಿಲುವನ್ನು ವಿವರಿಸಿದ ನ್ಯಾಯಮೂರ್ತಿ ಯಾದವ್, ವಿವಾದ ಸೃಷ್ಟಿ ಮಾಡಲು ತಮ್ಮ ಭಾಷಣದ ಆಯ್ದ ಭಾಗವನ್ನಷ್ಟೇ ಮಾಧ್ಯಮಗಳು ಪ್ರಸಾರ ಮಾಡಿವೆ ಎಂದು ಅವರು ಸಮಜಾಯಿಸಿ ನೀಡಿದ್ದರು.
ಆದರೆ ನ್ಯಾಯಮೂರ್ತಿ ಎಸ್ ಕೆ ಯಾದವ್ ಅವರ ವಿವರಣೆಗಳಿಗೆ ತೃಪ್ತರಾಗದ ಸುಪ್ರೀಂಕೋರ್ಟ್ ಕೊಲೀಜಿಯಂ, ನ್ಯಾಯಾಲಯದ ಒಳಗೆ ಮತ್ತು ಹೊರಗೆ ನ್ಯಾಯಾಧೀಶರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಜನ ನ್ಯಾಯಾಂಗದಲ್ಲಿ ಇರಿಸಿದ ನಂಬಿಕೆ, ಮಸುಕಾಗದಂತೆ ಅವರು ನೀಡಿದ ಪ್ರತಿ ಹೇಳಿಕೆಯು ಅವರ ಸ್ಥಾನದ ಘನತೆಗೆ ತಕ್ಕುದಾಗಿರಬೇಕು. ಹೈಕೋರ್ಟ್ ನ್ಯಾಯಮೂರ್ತಿಗಳು ತಮ್ಮ ಹುದ್ದೆಯ ಘನತೆಯನ್ನು ಕಾಪಾಡಿಕೊಳ್ಳಬೇಕು ತಮ್ಮ ಹುದ್ದೆಗೆ ತಕ್ಕದಾದ ರೀತಿಯಲ್ಲಿ ವರ್ತಿಸಬೇಕು ಎಂದು ಕಿವಿಮಾತು ಹೇಳಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.