ಪತಿ ಜೊತೆ ಕೇವಲ ಒಂದು ತಿಂಗಳು ಜೊತೆಗಿದ್ದ ಪತ್ನಿ 40 ಲಕ್ಷ ರೂ. ಜೀವನಾಂಶಕ್ಕೆ ಡಿಮ್ಯಾಂಡ್: ಕೋರ್ಟ್ ಕೊಟ್ಟ ತೀರ್ಪೇನು?
ಬೆಂಗಳೂರು: ದೇಶದಲ್ಲಿ ಹೆಣ್ಣುಮಕ್ಕಳಿಗಾಗುವ ಅನ್ಯಾಯ, ಕಿರುಕುಳವನ್ನ ತಪ್ಪಿಸುವ ಸಲುವಾಗಿ ಆಕೆಯ ರಕ್ಷಣೆಗೆಂದು ಜಾರಿಗೆ ತಂದಿರುವ ಕಾನೂನು, ನಿಯಮಗಳು ಸಾಧಾರಣವಾಗಿ ಹೆಣ್ಣು ಮಕ್ಕಳ ಪರವಾಗಿಯೇ ಇವೆ. ಆದರೆ ಇಂತಹ ಕಾನೂನುಗಳು ಇತ್ತೀಚೆಗೆ ಹೆಚ್ಚಾಗಿ ದುರುಪಯೋಗವಾಗುತ್ತಿದ್ದು ಇದರಡಿ ಸಿಲುಕುವ ಪುರುಷರು ಸಾಕಷ್ಟು ನೋವನುಭವಿಸುತ್ತಿದ್ದಾರೆ.
ತಮ್ಮ ರಕ್ಷಣೆಗಿರುವ ಕಾನೂನನ್ನೇ ಹೆಣ್ಣು ಮಕ್ಕಳು ಪತಿಯ ಮನೆಯವರ ವಿರುದ್ಧ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದು ಇದಕ್ಕೆ ಇತ್ತೀಚೆಗೆ ಬೆಂಗಳೂರಿನ ಟೆಕ್ಕಿ ಅತುಲ್ ಸಾವೇ ಒಂದು ಉದಾಹರಣೆಯಾಗಿದೆ. ಪತ್ನಿ ಮನೆಯವರ ಕಿರುಕುಳದಿಂದ ಬೇಸತ್ತು ವಿಡಿಯೋ ಮಾಡಿ ಅತುಲ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ #ರಿusಣiಛಿeಜಿoಡಿಂಣuಟ ಟ್ರೆಂಡ್ ಆಗಿದ್ದು ಪುರುಷರ ದನಿ ಜೋರಾಗಿ ಕೇಳಿ ಬರುತ್ತಿದೆ. ಅತುಲ್ ಪ್ರಕರಣ ಒಂದು ಉದಾಹರಣೆ ಮಾತ್ರ. ಇದೇ ಪ್ರಕರಣದಂತೆ ಹೆಣ್ಣು ಹಾಗೂ ಹೆಣ್ಣಿನ ಮನೆಯವರ ದೌರ್ಜನ್ಯಕ್ಕೊಳಗಾಗಿ ನೋವು ಅನುಭವಿಸುತ್ತಿರುವ ಅದೆಷ್ಟೋ ಮಂದಿ ಗಂಡಸರಿದ್ದಾರೆ. ಅದೇ ರೀತಿ, ಇದೀಗ ಇನ್ನೊಂದು ಪ್ರಕರಣ ಬಯಲಿಗೆ ಬಂದಿದೆ.
ಹೌದು ಗಂಡನ ಜೊತೆ ಕೇವಲ ಒಂದು ತಿಂಗಳು ಜೊತೆಗಿದ್ದು ನಂತರ 15 ವರ್ಷಗಳಿಂದ ದೂರವಿದ್ದ ಪತ್ನಿ ಈಗ 40 ಲಕ್ಷ ರೂ. ಜೀವನಾಂಶಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಈ ಕೋರ್ಟ್ ಕೇಸ್ ವೈರಲ್ ಆಗಿದೆ. ಈಗ ಕೋರ್ಟ್ ಪ್ರೊಸೀಡಿಂಗ್ಸ್ ಗಳನ್ನು ನೇರ ಪ್ರಸಾರದಲ್ಲಿ ನೋಡಬಹುದಾಗಿದ್ದು, ಈ ಹಿನ್ನೆಲೆಯಲ್ಲಿ, ಈ ಕೇಸಿನ ವೀಡಿಯೋ ಕೂಡ ವೈರಲ್ ಆಗಿದೆ. ಇದು ಎಲ್ಲಿಯ ವೀಡಿಯೋ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದರೆ ಇಂಜಿನಿಯರ್ ಒಬ್ಬರು ನ್ಯಾಯಾಧೀಶರ ಬಳಿ ತಮ್ಮ ನೋವನ್ನು ತೋಡಿಕೊಳ್ಳುವುದು, ಅವರ ಪರವಾಗಿ ವಾದಿಸುತ್ತಿರುವ ವಕೀಲರ ವಾದದಿಂದ ಈ ಕೇಸ್ ಅನ್ನು ಸುಲಭದಲ್ಲಿ ಅರ್ಥ ಮಾಡಿಕೊಳ್ಳಬಹುದಾಗಿದೆ.
ಒಂದೇ ತಿಂಗಳು ಮಾತ್ರ ಪತ್ನಿ ಪತಿಯೊಂದಿಗೆ ಇದ್ದಳು. ಆ ಬಳಿಕ ಆಕೆ ಪತಿಯನ್ನು ತೊರೆದಿದ್ದು 15 ವರ್ಷಗಳಿಂದ ದೂರವಿದ್ದಾಳೆ . ಅಂದಿನಿಂದಲೂ ಪರಿಹಾರಕ್ಕಾಗಿ ಹೋರಾಟ ನಡೆಯುತ್ತಿದ್ದು, ಪತ್ನಿ 40 ಲಕ್ಷ ರೂ ಜೀವನಾಂಶಕ್ಕೆ ಡಿಮ್ಯಾಂಡ್ ಮಾಡಿದ್ದಾಳೆ. ಆದರೆ ಪತಿ 15 ಲಕ್ಷ ರೂ. ಕೊಡಲು ಪತಿ ಒಪ್ಪಿಕೊಂಡಿದ್ದಾನೆ. ಹಾಗೋ ಹೀಗೂ ಮಾಡಿ ಪತಿ 30 ಲಕ್ಷ ರೂ. ಕೊಡಲು ಒಪ್ಪಿದರೂ, ಆಕೆ ಸುತರಾಂ ಒಪ್ಪುತ್ತಿಲ್ಲ. 40 ಲಕ್ಷವೇ ಬೇಕೆಂದು ಬೇಡಿಕೆ ಇಟ್ಟಿದ್ದಾಳೆ. ನಾನು 15 ಲಕ್ಷ ಕೊಡಬಹುದು. ಇದಕ್ಕಿಂತ ಹೆಚ್ಚು ದುಡ್ಡು ಕೊಡಬೇಕೆಂದರೆ ಸಾಲ ಮಾಡಬೇಕು ಎಂದು ಪತಿ, ನ್ಯಾಯಾಧೀಶರ ಮುಂದೆ ನೋವು ತೋಡಿಕೊಂಡಿದ್ಧಾನೆ. ಆದರೂ 30 ಲಕ್ಷ ಕೊಡಲು ಒಪ್ಪಿಕೊಂಡೆ. ಅದಕ್ಕೆ ಆಕೆಯ ತವರಿನವರು ಒಪ್ಪುತ್ತಿಲ್ಲ. ಅವಳು ಒಂದೇ ತಿಂಗಳು ಜೊತೆಗಿದ್ದಳು, ನನಗೆ ಇಷ್ಟು ಹಣ ಕೊಡಲು ಆಗುತ್ತಿಲ್ಲ ಎಂದು ಪತಿ ಕೋರ್ಟ್ ಮುಂದೆ ಅಳಲು ತೋಡಿಕೊಂಡಿದ್ದಾರೆ. ಪ್ರಕರಣ ಸಂಬಂಧ ವಾದ ಆಲಿಸಿದ ನ್ಯಾಯಾಧೀಶರು ವಕೀಲರಲ್ಲಿ ಎರಡೂ ಕಡೆಯವರು ಕೂತು ಸೆಟಲ್ಮೆಂಟ್ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.
ಈ ಪ್ರಕರಣ ಕುರಿತು ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಪರಿಹಾರ ಎನ್ನುವುದು ಹೆಣ್ಣುಮಕ್ಕಳಿಗೆ ವ್ಯವಹಾರ ಆಗಿದೆ ಎಂದು ಹೇಳಿದರೆ ಇನ್ನೂ ಕೆಲವರು ನಾನೇನಾದರು ನ್ಯಾಯಾಧೀಶನ ಸ್ಥಾನದಲ್ಲಿ ಇದ್ದಿದ್ದರೆ, ಒಂದು ಕಾಸು ಕೂಡ ಪರಿಹಾರ ಕೊಡಬೇಡ ಎಂದು ಆದೇಶಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ, ಅತುಲ್ ಕೇಸ್ ಬಗ್ಗೆ ಮಾತನಾಡಿರುವ ಕೆಲವರು, ನ್ಯಾಯಾಧೀಶರು ಹೇಗೆ ಲಂಚ ಕೇಳುವ ಪ್ರಸಂಗದ ಬಗ್ಗೆ ಚರ್ಚೆ ಮಾಡಿದ್ದಾರೆ. ಹೀಗೆ ಹೆಣ್ಣಿನ ರಕ್ಷಣೆಗಿರುವ ಕಾನೂನುಗಳು ದುರುಪಯೋಗವಾಗುತ್ತಿದ್ದು ಇದನ್ನ ತಡೆಗಟ್ಟಲು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ