ಸ್ಯೂಸೈಡ್ ನೋಟ್‌ನಲ್ಲಿಹೆಸರು – ಸಮಗ್ರ ತನಿಖೆ ಅಗತ್ಯ-ಹೈಕೋರ್ಟ್
ಬೆಂಗಳೂರು: ಕೆಲವರು ಆತ್ಮಹತ್ಯೆ ಮಾಡಿಕೊಂಡಾಗ ಡೆತ್ ನೋಟ್ ಬರೆದಿಡುತ್ತಾರೆ. ತಮ್ಮ ಸಾವಿಗೆ ಏನು ಕಾರಣ ? ಯಾರು ಕಾರಣ? ಅಥವ ಯಾವುದೇ ವಿಚಾರವನ್ನು ಬರೆದು ಆತ್ಮಹತ್ಯೆಗೆ ಶರಣಾಗುತ್ತಾರೆ. ಹೀಗೆ ಡೆತ್‌ನೋಟ್ ಬರೆದಿಟ್ಟು ಇಂಥವರೇ ತಮ್ಮ ಸಾವಿಗೆ ಕಾರಣ ಅಂತ ಹೇಳಿದ್ದರೆ ಅವರನ್ನು ಆರೋಪಿ ಅಂತ ತೀರ್ಮಾನಿಸುವುದು ಸರಿಯೇ?
ಇಲ್ಲ. ಹೀಗೆ ತೀರ್ಮಾನಿಸಲು ಸಾಧ್ಯವಿಲ್ಲ. ಆತ ನಿಜಕ್ಕೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆಯೇ ಇಲ್ಲವೇ ಎಂಬುದನ್ನು ತಿಳಿಯಲು ಸಮಗ್ರವಾಗಿ ತನಿಖೆಯನ್ನು ನಡೆಸಬೇಕು ಎಂಬ ಮಹತ್ವದ ತೀರ್ಪನ್ನು ರಾಜ್ಯ ಹೈಕೋರ್ಟ್ ನೀಡಿದೆ.
ಬಸವರಾಜ್ ಎಂಬುವರು ವೃತ್ತಿಯಲ್ಲಿಶಿಕ್ಷಕರಾಗಿದ್ದರು. ಆವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಮ್ಮ ಸಾವಿಗೆ ಶಿಕ್ಷಣಾಧಿಕಾರಿ ಹನುಮಂತರಾಯಪ್ಪ ಅವರೇ ಕಾರಣ ಎಂದು ಹೇಳಿದ್ದರು. ಈ ಕುರಿತು ಹನುಮಂತರಾಯಪ್ಪ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಕಲಬುರಗಿ ಏಕಸದಸ್ಯ ಪೀಠದ ನ್ಯಾಯಮೂರ್ತಿ ವೆಂಕಟೇಶ್ ಟಿ.ನಾಯಕ್ ಅವರು ಈ ಕುರಿತು ತೀರ್ಪು ನೀಡಿದ್ದಾರೆ.
ಕೆಲವು ಆತ್ಮಹತ್ಯೆ ಪ್ರಕರಣಗಳಲ್ಲಿದೊರೆಯುವ ಸ್ಯೂಸೈಡ್ ನೋಟ್‌ನಲ್ಲಿಕೆಲವರ ಮೇಲೆ ಆರೋಪ ಮಾಡಲಾಗಿರುತ್ತದೆ. ಆತ್ಮಹತ್ಯೆಗೆ ಇವರೇ ಪ್ರಚೋದನೆ ನೀಡಿದ್ದಾರೆಂದು ಬಂಧಿಸಲಾಗುತ್ತದೆ. ಸ್ಯೂಸೈಡ್ ನೋಟ್‌ನಲ್ಲಿರುವ ಅಂಶಗಳು ಹಾಗೂ ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿ ಸತ್ಯಾಂಶ ಅರಿಯಲು ಪೂರ್ಣ ಪ್ರಮಾಣದ ತನಿಖೆ ಹಾಗೂ ವಿಚಾರಣೆ ನಡೆಯಬೇಕು ಎಂದು ನ್ಯಾಯಾಲಯ ಹೇಳಿದೆ.
ಆತ್ಮಹತ್ಯೆಗೆ ಪ್ರಚೋದನೆಯೇ ಮುಖ್ಯ ಕಾರಣ ಎಂದು ದೃಢಪಟ್ಟರೆ ಮಾತ್ರ ಐಪಿಸಿ ಸೆಕ್ಷನ್ 306ರ ಅಡಿಯಲ್ಲಿಪ್ರಕರಣ ದಾಖಲಿಸಬೇಕು. ಐಪಿಸಿ ಸೆಕ್ಷನ್ 306ರ ಅನ್ವಯ ಈ ಪ್ರಕರಣ ದಾಖಲಿಸಲಾಗಿದೆ. ತನಿಖೆ ಇನ್ನೂ ಬಾಕಿ ಇದೆ. ತನಿಖಾಧಿಕಾರಿಯು ಸ್ಯೂಸೈಡ್ ನೋಟ್‌ನ ಸತ್ಯಾಸತ್ಯತೆ ಪರಿಶೀಲಿಸಬೇಕಿದೆ. ಈ ಹಂತದಲ್ಲಿಹನುಮಂತರಾಯಪ್ಪ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಲು ಸಾಧ್ಯವಿಲ್ಲಎಂದು ಹನುಮಂತರಾಯಪ್ಪ ಅವರ ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ.