23/12/2024

Law Guide Kannada

Online Guide

ಸುಪ್ರೀಂಕೋರ್ಟ್‌ 2023ರಲ್ಲಿನೀಡಿರುವ ಪ್ರಮುಖ ತೀರ್ಪುಗಳು

1. ಶ್ರೀರಾಮ್‌ ಶ್ರೀಧರ್‌ ಚಿಮುರ್ಕರ್‌ ವರ್ಸಸ್‌ ಯೂನಿಯನ್‌ ಆಫ್‌ ಇಂಡಿಯಾ
ಸರಕಾರಿ ನೌಕರನ ನಿಧನದ ನಂತರ ಅವರ ಪತ್ನಿ ದತ್ತುವಾಗಿ ಪಡೆದ ಪುತ್ರ ಅಥವಾ ಪುತ್ರಿ ಯನ್ನು ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು 1972ರ ಅಡಿಯಲ್ಲಿಕುಟುಂಬ ಪದದ ಅಡಿಯಲ್ಲಿಸೇರಿಸಲಾಗುವುದಿಲ್ಲಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ.

2. ಡಾ.ಜಯಾ ಠಾಕೂರ್‌ ವರ್ಸಸ್‌ ಯೂನಿಯನ್‌ ಆಫ್‌ ಇಂಡಿಯಾ
ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರು
ವಿದ್ಯಾರ್ಥಿನಿಯರಿಗೆ ಉಚಿತ ಮುಟ್ಟಿನ ಪ್ಯಾಡ್‌ಗಳು ಮತ್ತು ಕಪ್‌ಗಳನ್ನು ವಿತರಿಸುವುದು ಸೇರಿದಂತೆ ಮುಟ್ಟಿನ ನೈರ್ಮಲ್ಯ ಕುರಿತು ಏಕರೂಪದ ರಾಷ್ಟ್ರೀಯ ನೀತಿಯನ್ನು ಜಾರಿಗೊಳಿಸಬೇಕೆಂದು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದ್ದಾರೆ.

3. ಶಬ್ಧಮ್‌ ಜಹಾನ್‌ ಮೊಯಿಯುದ್ದೀನ್‌ ಅನ್ಸಾರಿ ವರ್ಸಸ್‌ ಮಹಾರಾಷ್ಟ್ರ
ಮುಂಬೈ ಹೈಕೋರ್ಟ್‌ ಉದ್ಯೋಗಸ್ಥ ಮಹಿಳೆಯ ದತ್ತು ಪಡೆಯುವ ಹಕ್ಕನ್ನು ಈ ತೀರ್ಪಿನಲ್ಲಿಹೇಳಿದೆ.

4. ಸಂವಿಧಾನದ 370ನೇ ವಿಧಿ
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370 ವಿಧಿಯನ್ನು ರದ್ದುಪಡಿಸಿದ ಕೇಂದ್ರ ಸರಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿಯಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.