23/12/2024

Law Guide Kannada

Online Guide

ವಕೀಲರ ಸಮ್ಮುಖದಲ್ಲಿ ನಡೆಯುವ ವಿವಾಹಕ್ಕೂ ಮನ್ನಣೆ: ಸುಪ್ರೀಂಕೋರ್ಟ್

ವಕೀಲರ ಕೊಠಡಿಯಲ್ಲಿಯೇ ಗಂಡು-ಹೆಣ್ಣು ಪರಸ್ಪರ ಹೂವಿನ ಹಾರಗಳನ್ನು ಬದಲಾಯಿಸಿಕೊಂಡು ಅಥವಾ ಉಂಗುರ ತೊಡಿಸುವ ಮೂಲಕ ಸರಳವಾಗಿ ಮದುವೆಯಾಗಬಹುದು. ಇದಕ್ಕೂ ಹಿಂದೂ ವಿವಾಹ ಕಾಯ್ದೆಯಲ್ಲಿ ಮನ್ನಣೆ ಸಿಗಲಿದೆ ಎಂದು ಸುಪ್ರೀಂಕೋರ್ಟ್ ಪ್ರತಿಪಾದಿಸಿದೆ.
ಅಪರಿಚಿತರ ಸಮ್ಮುಖದಲ್ಲಿ ರಹಸ್ಯವಾಗಿ ನಡೆಯುವ ವಿವಾಹವನ್ನು ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 7 ಮತ್ತು 7(ಎ) ಅಡಿ ಕಾನೂನುಬದ್ಧಗೊಳಿಸಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ವಜಾಗೊಳಿಸಿತು.
ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್. ರವೀಂದ್ರಭಟ್ ಮತ್ತು ಅರವಿಂದಕುಮಾರ್ ಅವರಿದ್ದ ವಿಭಾಗೀಯ ಪೀಠವು ‘ನ್ಯಾಯಾಲಯದಲ್ಲಿ ಕೆಲಸ ನಿರ್ವಹಿಸುವುದಕ್ಕಷ್ಟೇ ವಕೀಲರ ಸಾಮಥ್ರ್ಯ ಸೀಮಿತಗೊಂಡಿಲ್ಲ, ಸ್ನೇಹಿತ, ಸಂಬಂಧಿ ಹಾಗೂ ಸಾಮಾಜಿಕ ಕಾರ್ಯಕರ್ತನ ಸ್ಥಾನದಲ್ಲಿ ನಿಂತುಕೊಂಡು ಮದುವೆ ಮಾಡಿಸಬಹುದು ಎಂದು ಕಾಯ್ದೆಯ ಸೆಕ್ಷನ್ (ಎ) ಅಡಿ ಸ್ಪಷ್ಟಪಡಿಸಲಾಗಿದೆ (ತಮಿಳುನಾಡು ಸರ್ಕಾರದ ತಿದ್ದುಪಡಿ ಕಾಯ್ದೆ) ಎಂದು ಹೇಳಿದೆ.
ಸಂಬಂಧಿಕರು, ಸ್ನೇಹಿತರು ಅಥವಾ ಇತರೆ ವ್ಯಕ್ತಿಗಳ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನಡೆಯುವ ಮದುವೆಗೆ ಸೆಕ್ಷನ್ (ಎ) ಅನ್ವಯಿಸುತ್ತದೆ. ಅರ್ಚಕರ ಉಪಸ್ಥಿತಿ ಇಲ್ಲದೆಯೇ ನಡೆಯುವ ವಿವಾಹಕ್ಕೂ ಕಾನೂನಿನ ಮನ್ನಣೆ ನೀಡುವುದಕ್ಕೆ ಈ ಸೆಕ್ಷನ್ ಅವಕಾಶ ಕಲ್ಪಿಸಲಿದೆ ಎಂದು ಹೇಳಿದೆ.

Copyright © All rights reserved. | Newsphere by AF themes.