ನ್ಯಾಯಾಧೀಶರ ವಜಾ ಆದೇಶ ಎತ್ತಿ ಹಿಡಿದ ಹೈಕೋರ್ಟ್
ಅಹಮದಾಬಾದ್: ನ್ಯಾಯಾಧೀಶರೊಬ್ಬರನ್ನು ಸೇವೆಯಿಂದ ವಜಾಗೊಳಿಸಿದ ಕ್ರಮವನ್ನು ಗುಜರಾತ್ ಹೈಕೋರ್ಟ್ ಎತ್ತಿ ಹಿಡಿದಿದೆ.
ನ್ಯಾಯಾಧೀಶ ನೀಲೇಶ್ ಭಾಯ್ ಚೌಹಾಣ್ ಅವರು ಹೈಕೋರ್ಟ್ ಆಡಳಿತಾತ್ಮಕ ನ್ಯಾಯಮೂರ್ತಿಗಳು ಹಾಗೂ ಪ್ರಧಾನ ಜಿಲ್ಲಾನ್ಯಾಯಾಧೀಶರ ವಿರುದ್ಧ ಅಸಂಬದ್ಧವಾಗಿ ಪತ್ರ ಬರೆದು ಆಧಾರರಹಿತ ಆರೋಪಗಳನ್ನು ಮಾಡಿದ್ದರು. ನಂತರ ಅನಧಿಕೃತವಾಗಿ ಗೈರು ಹಾಜರಾದರು.
ನ್ಯಾಯಾಂಗ ವ್ಯವಸ್ಥೆ ಕೊಳೆತ ಸ್ಥಿತಿಯಲ್ಲಿಇದೆ. ಇದನ್ನು ಸರಿಪಡಿಸದ ಹೊರತು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಪತ್ರ ಬರೆದು ಅನಧಿಕೃತವಾಗಿ ರಜೆ ತೆಗೆದುಕೊಂಡಿದ್ದರು.
ಪತ್ರದಲ್ಲಿಆಕ್ಷೇಪಾರ್ಹ ಪದಗಳನ್ನು ಬಳಸಿದ್ದರು. ಹೀಗಾಗಿ, ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಈ ಆದೇಶ ಪ್ರಶ್ನಿಸಿ ನೀಲೇಶ್ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು.
ನ್ಯಾಯಾಧೀಶರ ಇಂತಹ ವರ್ತನೆ , ನಡವಳಿಕೆ ಒಬ್ಬ ನ್ಯಾಯಾಂಗ ಅಧಿಕಾರಿಗೆ ಸೂಕ್ತವಲ್ಲ ಎಂದು ಹೈಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಬೀರೇನ್ ವೈಷ್ಣವ್ ಮತ್ತು ನಿಶಾ ಠಾಕೂರ್ ಅವರಿದ್ದ ಪೀಠವು ಈ ತೀರ್ಪು ನೀಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ