ಕೊಲಿಜಿಯಂನಲ್ಲಿ ಪಾರದರ್ಶಕತೆ- ನ್ಯಾ.ಚಂದ್ರಚೂಡ್
ನವದೆಹಲಿ: ನ್ಯಾಯಮೂರ್ತಿಗಳ ನೇಮಕದ ಕೊಲಿಜಿಯಂ ವ್ಯವಸ್ಥೆಯಲ್ಲಿಪಾರದರ್ಶಕತೆ ಇಲ್ಲ ಎನ್ನುವುದು ಸರಿಯಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ.
ಯಾವುದೇ ಒಂದು ವ್ಯವಸ್ಥೆಯನ್ನು ಟೀಕಿಸುವುದು ಸುಲಭ. ಕೊಲಿಜಿಯಂ ವ್ಯವಸ್ಥೆಯಲ್ಲಿ ಇನ್ನೂ ಹೆಚ್ಚಿನ ಪಾರದರ್ಶಕತೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೊಲಿಜಿಯಂ ಒಳಗೆ ನಡೆಯುವ ಚರ್ಚೆಗಳ ವಿವರಗಳನ್ನು ಬಹಿರಂಗಪಡಿಸುವುದಿಲ್ಲ. ನಿರ್ಧರಿಸುವ ಪ್ರಕ್ರಿಯೆಯಲ್ಲಿ ವಸ್ತುನಿಷ್ಠತೆಯನ್ನು ಕಾಪಾಡಲಾಗುತ್ತದೆ. ನಮ್ಮದು ವೈವಿಧ್ಯಮಯ ಸಮಾಜ. ಇದನ್ನು ಅರಿತು ನಮ್ಮ ನಿರ್ಧಾರದ ಪ್ರಕ್ರಿಯೆಯನ್ನು ನಂಬುವುದನ್ನು ನಾವು ಮೊದಲು ಕಲಿಯಬೇಕಿದೆ ಎಂದು ಪಿ.ಟಿ.ಐಗೆ ನೀಡಿರುವ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ನ್ಯಾಯಾಂಗದಲ್ಲಿ ಕೊಲಿಜಿಯಂ ವ್ಯವಸ್ಥೆ 1993ರಿಂದಲೂ ಜಾರಿಯಲ್ಲಿದೆ. ಕೊಲಿಜಿಯಂ ನಿರ್ಧಾರಗಳನ್ನು ನಮ್ಮ ಅಂತರ್ಜಾಲ ತಾಣದಲ್ಲಿ ಪ್ರಕಟಿಸುತ್ತೇವೆ. ಇದು ಕೂಡ ಪಾರದರ್ಶಕತೆಯಾಗಿದೆ ಎಂದು ನ್ಯಾ.ಚಂದ್ರಚೂಡ್ ತಿಳಿಸಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ