23/12/2024

Law Guide Kannada

Online Guide

ಅಪಘಾತ ಸಂಭವಿಸಿದರೆ ಮೂಲ ಮಾಲೀಕರೇ ನೇರ ಹೊಣೆಗಾರರು: ಹೈಕೋರ್ಟ್ ಮಹತ್ವದ ತೀರ್ಪು

ಫಾರಂ ಸಂಖ್ಯೆ 29ರಲ್ಲಿ ಸಹಿ ಮತ್ತು ನಿರಾಪೇಕ್ಷಣಾ ಪ್ರಮಾಣ ಪತ್ರವನ್ನು ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್.ಟಿ.ಒ.) ದಾಖಲೆಗಳಲ್ಲಿ ನಮೂದಿಸದ ಹೊರತು ವಾಹನದ ಮಾಲೀಕರ ಹೆಸರು ಸ್ವಯಂಚಾಲಿತವಾಗಿ ವರ್ಗಾವಣೆಗೊಳ್ಳುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.


2015ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಾತಕಿ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ಪ್ರಶ್ನಿಸಿ ಮಹಾರಾಷ್ಟ್ರದ ಕೊಲ್ಹಾಪುರದ ಅವಿನಾಷ್ ಹರಿಬಾ ಅಳಬೆ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಶ್ರೀಷಾನಂದ ಅವರು ಧಾರವಾಡ ಪೀಠದಲ್ಲಿ ಈ ಆದೇಶ ನೀಡಿದ್ದಾರೆ.


ಅಪಘಾತ ಸಂಭವಿಸಿದಾಗ ವಾಹನದ ಮಾಲೀಕತ್ವವು ಶಶಿಕಾಂತ ಶೋಮಗೌಡ ಪಾಟೀಲ್ ಎಂಬುವರ ಹೆಸರಿನಲ್ಲಿತ್ತು. ಆದರೆ ಅವರು ವಾಹನವನ್ನು ಮಾರಾಟ ಮಾಡಿದಾಗ ಖರೀದಿದಾರರ ಹೆಸರಿಗೆ ವರ್ಗಾಯಿಸಿರುವುದಿಲ್ಲ ಮತ್ತು ಆರ್.ಟಿ.ಒ. ರಿಜಿಸ್ಟರ್ನಲ್ಲಿ ನಮೂದಿಸಿರುವುದಿಲ್ಲ. ಹಿಂದಿನ ಮಾಲೀಕರು ಆರ್.ಟಿ.ಒ. ದಾಖಲೆಗಳಿಂದ ತನ್ನ ಹೆಸರನ್ನು ತೆಗೆದುಹಾಕಲು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಮತ್ತು ನಂತರದ ಖರೀದಿದಾರರ ಹೆಸರನ್ನು ನಮೂದಿಸದಿದ್ದರೆ ಅದರ ಹೊಣೆಗಾರಿಕೆಯನ್ನು ಹಿಂದಿನ ಮಾಲೀಕರೇ ಭರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
‘ಹೆಸರು ವರ್ಗಾಯಿಸದ ಕಾರಣ ತನಿಖಾ ಸಂಸ್ಥೆಯು ಅರ್ಜಿದಾರರನ್ನು ಆರೋಪಿ ಎಂದು ಘೋಷಿಸಲು ಅನುಮತಿಯಿಲ್ಲ. ಈ ಬಗ್ಗೆ ತನಿಖೆ ನಡೆಸಿ ವಾಹನದ ಮಾಲೀಕ ಮತ್ತು ಅಪಘಾತಕ್ಕೆ ಕಾರಣರಾದವರ ವಿರುದ್ಧ ವರದಿ ಸಲ್ಲಿಸಲು ಪೊಲೀಸರಿಗೆ ಸ್ವಾತಂತ್ರ್ಯವಿದೆ ಎಂದು ನ್ಯಾಯಾಲಯ ಹೇಳಿದೆ.


ಪ್ರಕರಣದ ವಿವರ : ಬೆಳಗಾವಿಯಿಂದ ಕಾಕತಿ ಕಡೆಗೆ ಹೋಗುತ್ತಿದ್ದ ಕಾರು, ಸರಕು ಸಾಗಣೆ ವಾಹನ ಮತ್ತು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಹಾಗೂ ಸರಕು ಸಾಗಣೆ ವಾಹನದಲ್ಲಿದ್ದವರು ಗಾಯಗೊಂಡಿದ್ದರು. ಅಪಘಾತ ಸಂಭವಿಸದಾಗ ತಾವು ವಾಹನದ ಮಾಲೀಕರಾಗಿರಲಿಲ್ಲ, ಆದ್ದರಿಂದ ತಾನು ಆರೋಪಿ ಎಂದು ಪರಿಗಣಿಸಲಾಗುವುದಿಲ್ಲ ಎಂದು
 ತನಿಖಾ ಸಂಸ್ಥೆಯ ಗಮನಕ್ಕೆ ತಂದರೂ ತನ್ನ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು.

Copyright © All rights reserved. | Newsphere by AF themes.