23/12/2024

Law Guide Kannada

Online Guide

ವಕೀಲರ ವೃತ್ತಿಪರ ಸೇವೆಗೆ ವಾಣಿಜ್ಯ ತೆರಿಗೆ ಸಲ್ಲದು – ದೆಹಲಿ ಕೋರ್ಟ್‌ ಆದೇಶ

ನವದೆಹಲಿ : ವಕೀಲರು ತಮ್ಮ ಕಕ್ಷಿದಾರರಿಗೆ ನೀಡುವ ವೃತ್ತಿಪರ ಸೇವೆಗೆ ವಾಣಿಜ್ಯ ತೆರಿಗೆ ವಿಧಿಸಬಹುದೇ?

ಇಲ್ಲ. ಇದು ಸಾಧ್ಯವಿಲ್ಲ. ವಕೀಲರ ವೃತ್ತಿಪರ ಸೇವೆಯನ್ನು ವಾಣಿಜ್ಯಾತ್ಮಕವಾಗಿ ಕಾಣುವಂತಿಲ್ಲ. ವಾಣಿಜ್ಯ ಸಂಸ್ಥೆ ವರ್ಗದಡಿ ವಾಣಿಜ್ಯ ತೆರಿಗೆ ವಿಧಿಸುವಂತಿಲ್ಲಎಂದು ದೆಹಲಿ ಹೈಕೋರ್ಟ್‌ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ನಜ್ಮಿ ವಜೀರಿ ಹಾಗೂ ಸುಧೀರ್‌ಕುಮಾರ್‌ ಜೈನ್‌ ಅವರ ವಿಭಾಗೀಯ ಪೀಠ ಈ ಕುರಿತು ಆದೇಶ ನೀಡಿದೆ. ದೆಹಲಿ ಹೈಕೋರ್ಟ್‌ ಏಕಸದಸ್ಯ ಪೀಠ ಈ ಕುರಿತು ಜನವರಿ 2015ರಲ್ಲಿನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಭಾಗೀಯ ಪೀಠ ಇತ್ಯಥ ರ್‍ಗೊಳಿಸಿತು. ಏಕಸದಸ್ಯ ಪೀಠ ನೀಡಿರುವ ಆದೇಶಕ್ಕೆ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲಎಂದು ವಿಭಾಗೀಯ ಪೀಠ ಹೇಳಿದೆ.
ವಕೀಲರ ವೃತ್ತಿಪರ ಸೇವೆಯನ್ನು ವಾಣಿಜ್ಯ ಚಟುವಟಿಕೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ವೃತ್ತಿ ಶುಲ್ಕಕ್ಕೆ ವಾಣಿಜ್ಯ ತೆರಿಗೆಯನ್ನು ವಿಧಿಸಬಾರದು ಎಂದು ನ್ಯಾಯಾಲಯ ಆದೇಶಿಸಿದೆ.

Copyright © All rights reserved. | Newsphere by AF themes.