23/12/2024

Law Guide Kannada

Online Guide

ಪೋಕ್ಸೋ ಕಾಯ್ದೆ – ಸುಪ್ರೀಂ ಕೋರ್ಟ್ ಮಹತ್ವದ, ಐತಿಹಾಸಿಕ ತೀರ್ಪು

ಪೋಕ್ಸೋ ಕಾಯ್ದೆ – ವಯಸ್ಸು

ಫೊಕ್ಸೋ ಕಾಯ್ದೆ ನ್ಯಾಯಾಂಗದ ಅತ್ಯಂತ ಮಹತ್ವದ ಕಾಯ್ದೆಗಳಲ್ಲಿ ಒಂದು. ಮಕ್ಕಳ ಮೇಲೆ ಆಗುವ ಲೈಂಗಿಕ ದೌರ್ಜನ್ಯದಿಂದ ಹಿಡಿದು ಅತ್ಯಾಚಾರ ಪ್ರಕರಣಗಳಿಗಾಗಿ ವಿಶೇವಾಗಿ ರೂಪಿಸಲಾದ ಕಾಯ್ದೆಯಿದು. ಈ ಕಾಯ್ದೆಯಲ್ಲಿ ಆರೋಪಿಗೆ ಶಿಕ್ಷೆ ನೀಡುವುದರ ಜೊತೆಗೆ ನೊಂದವರ ಹಿತ ಕಾಯುವುದಕ್ಕೂ ಹೆಚ್ಚಿನ ಮಹತ್ವ ನೀಡಲಾಗಿದೆ. ಈ ಕಾಯ್ದೆಯು 18 ವರ್ಷ ಒಳಗಿನ ಮಕ್ಕಳಿಗೆ ಅನ್ವಯವಾಗುತ್ತದೆ. ಹೀಗಾಗಿ ದೌರ್ಜನ್ಯಕ್ಕೆ ಒಳಗಾದವರ ವಯಸ್ಸು ನಿರ್ಧರಿಸುವ ಮಾನದಂಡ ಇಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ಪಡೆದುಕೊಂಡಿದೆ.

ವಯಸ್ಸು ತಿಳಿಯುವ ಮಾನದಂಡ
ಸಾಮಾನ್ಯವಾಗಿ ನೊಂದವರ ವಯಸ್ಸನ್ನು ಪತ್ತೆ ಹಚ್ಚಲು ಈ ಹಿಂದೆ ನೊಂದವರ ಶಾಲಾ ದಾಖಲಾತಿಗಳ ಆಧಾರವನ್ನು ಪರಿಗಣಿಸಲಾಗುತಿತ್ತು. ಆದರೆ ಭಾರತದ ಸರ್ವೋಚ್ಚ ನ್ಯಾಯಾಲಯವು ತನ್ನ ಇತ್ತೀಚಿನ ತೀರ್ಪಿನಲ್ಲಿ ಇದಕ್ಕೆ ಬ್ರೇಕ್ ಹಾಕಿದೆ. ನ್ಯಾಯಾಲಯದ ಪ್ರಕಾರ ಶಾಲಾ ವರ್ಗಾವಣೆ ಪ್ರಮಾಣ ಪತ್ರ ಹಾಗೂ ಶಾಲಾ ರಿಜಿಸ್ಟರ್ ಆಧಾರದಲ್ಲಿ ಪೋಕ್ಸೋ ಪ್ರಕರಣದಲ್ಲಿ ನೊಂದ ಬಾಲಕಿ ಅಥವಾ ಬಾಲಕನ ವಯಸ್ಸನ್ನು ನಿರ್ಧರಿಸಲು ಸಾಧ್ಯವಿಲ್ಲವೆಂದು ತಿಳಿಸಿದೆ. ಮಾನ್ಯ ನ್ಯಾಯಾಧೀಶರಾದ ಜಸ್ಟೀಸ್ ರವೀಂದ್ರ ಭಟ್ ಹಾಗೂ ಜಸ್ಟೀಸ್ ಅರವಿಂದ ಕುಮಾರ್ ಅವರ ಪೀಠ ಈ ಬಗ್ಗೆ ಮಹತ್ವದ ತೀರ್ಪು ನೀಡಿದೆ.  ತೀರ್ಪಿನಲ್ಲಿ ಯಾವುದೇ ಪೋಕ್ಸೋ ಪ್ರಕರಣದಲ್ಲಿ ವ್ಯಕ್ತಿಯ ವಯಸ್ಸಿನ ವಿಷಯದಲ್ಲಿ ತಕರಾರು ಬಂದಾಗ ಅದನ್ನು ಕಲಂ 94 ಎuveಟಿiಟe ರಿusಣiಛಿe ಚಿಛಿಣ ಪ್ರಕಾರ ನಿರ್ಧರಿಸಬೇಕೆಂದು ಸೂಚಿಸಿದೆ. ಇನ್ನು ಸರ್ವೋಚ್ಚ ನ್ಯಾಯಾಲಯವು, ಪೋಕ್ಸೋ ಕಾಯ್ದೆಯಡಿಯಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಯ ಮೇಲ್ಮನವಿಯನ್ನು ನಿರ್ಧರಿಸುವ ಸಮಯದಲ್ಲಿ ಈ ತೀರ್ಪು ನೀಡಿದೆ. ಪ್ರಕರಣದಲ್ಲಿ ಕೆಳ ನ್ಯಾಯಾಲಯವು ಶಾಲಾ ವರ್ಗಾವಣೆ ಪ್ರಮಾಣ ಪತ್ರ ಹಾಗೂ ಶಾಲಾ ರಿಜಿಸ್ಟರ್ ಆಧಾರದಲ್ಲಿ ತೀರ್ಪು ನೀಡಿತ್ತು. ಆದರೆ ವೈದ್ಯಕೀಯ ಪರೀಕ್ಷೆಯ ಪ್ರಕಾರ ಬಾಲಕಿಯ ವಯಸ್ಸು ಅಂದಾಜು18 ವರ್ಷಕ್ಕಿಂತ ಮೇಲೆ ಹಾಗೂ 20 ವರ್ಷಕ್ಕಿಂತ ಕೆಳಗಿರಬಹುದು ಎಂದು ನೀಡಲಾಗಿತ್ತು. ಆದರೆ ವೈದ್ಯರು ವೈದ್ಯಕೀಯ ದಾಖಲಾತಿಗಳ ಸಾಕ್ಷಿಯಯನ್ನು ಪರಿಗಣಿಸಲಾಗುವುದಿಲ್ಲ ಎಂದು ತಳ್ಳಿ ಹಾಕಿ ಶಾಲಾ ದಾಖಲಾತಿಗಳ ಅಧಾರದ ಮೇಲೆ ತೀರ್ಪು ನೀಡಿತ್ತು. 

ಕೆಳ ನ್ಯಾಯಾಲಯದ ತೀರ್ಪಿಗೆ ವ್ಯತಿರಿಕ್ತ ತೀರ್ಪು

 ಉಚ್ಚ ನ್ಯಾಯಾಲಯವು ಶಾಲಾ ದಾಖಲೆಗಳಿಂದ ನಿರ್ದಿಷ್ಟ ವಯಸ್ಸು ತಿಳಿದಾಗ, ವೈದ್ಯರ ಸಾಕ್ಷವನ್ನು ಪರಿಗಣಿಸಲಾಗುವುದೆಲ್ಲವೆಂದು ತಳ್ಳಿ ಹಾಕಿತ್ತು. ಆದರೆ ಸರ್ವೋಚ್ಚ ನ್ಯಾಯಾಲಯ ಈ ಆದೇಶಕ್ಕೆ ಅಸಮ್ಮತಿ ಸೂಚಿಸಿದೆ. ಅಷ್ಟೇ ಅಲ್ಲ ಸುಪ್ರೀಂ ಕೋರ್ಟ್‌ನ ಪೀಠವು, “ಉಚ್ಚ ನ್ಯಾಯಾಲಯದ ಈ ತೀರ್ಪು ಕಾನೂನು ಬದ್ಧವಾಗಿಲ್ಲ ಹಾಗೂ ತಪ್ಪಿನಿಂದ ಕೂಡಿರುತ್ತದೆ ಎಂದು ತೀರ್ಪು ನೀಡಿದೆ‌. ಕಲಂ 94 ಜುವೆನೈಲ್ ಜಸ್ಟಿಸ್ ಆಕ್ಟ್ ಪ್ರಕಾರ ಶಾಲಾ ದಾಖಲಾತಿಗಳ ಆಧಾರದ ಮೇಲೆ ವ್ಯಕ್ತಿಯ ವಯಸ್ಸನ್ನು ನಿರ್ಧರಿಸುವುದು ಅಸಮಂಜಸ. ಅದಲ್ಲದೆ ದಾಖಲಾತಿಗಳು ಕಲಂ 94(2) ಅಡಿಯಲ್ಲಿ ತಿಳಿಸಿರುವಂತಹ ದಾಖಲೆಗಳಾಗಿರುವುದಿಲ್ಲ. ಇಂತಹ ಸಂದರ್ಭದಲ್ಲಿ ವೈದ್ಯರು ನೀಡಿರುವ ಆಸಿಫಿಕೇಶನ್ ಪರೀಕ್ಷೆಯ ಆಧಾರದ ಮೇಲೆ ವಯಸ್ಸು ನಿರ್ಧರಿಸುವುದು ಸರಿಯಾದ ಕ್ರಮವಾಗಿರುತ್ತದೆ. ವೈದ್ಯರು ನೊಂದ ಬಾಲಕಿಯ ಹಲವಾರು ಎಕ್ಸರೇ ಚಿತ್ರಗಳನ್ನು ಪರಿಶೀಲಿಸಿ, ತಮ್ಮ ಸಾಕ್ಷಿ ನುಡಿಯುವಾಗ ಆ ಬಾಲಕಿಯ ವಯಸ್ಸು 19 ವರ್ಷ ಇರಬಹುದೆಂದು ನುಡಿದಿರುತ್ತಾರೆ. ಇವೆಲ್ಲಾ ಸಾಕ್ಷಾಧಾರಗಳನ್ನು ಗಮನಿಸಿದಾಗ ವೈದ್ಯಕೀಯ ಆಸಿಫಿಕೇಶನ್ ಪರೀಕ್ಷೆಯು ನಂಬಬಹುದಾದಂತಹ ಸಾಕ್ಷ್ಯವೆಂದು ಪರಿಗಣಿಸಿರುತ್ತದೆ ಎಂದು ತಿಳಿಸಿದೆ. ಇದಕ್ಕೂ ಮುಂದುವರೆದು ಈ ಪ್ರಕರಣದಲ್ಲಿ ನೊಂದ ಬಾಲಕಿಯು ಆರೋಪಿಯಿಂದ ಯಾವುದೇ ಠಿeಟಿeಣಡಿಚಿಣive sexuಚಿಟ ಅಟ್ಯಾಕ್ ಆಗಿರುವುದಿಲ್ಲವೆಂದು ತಿಳಿಸಿರುತ್ತಾಳೆ. ಹಾಗಾಗಿ ಈ ಪ್ರಕರಣವು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಬರುವುದಿಲ್ಲವೆಂದು ತೀರ್ಮಾನಿಸಿ ಆರೋಪಿಯನ್ನು ಬಿಡುಗಡೆ ಮಾಡಿ ಐತಿಹಾಸಿಕ ತೀರ್ಪು ನೀಡಿರುತ್ತದೆ. ಪೋಕ್ಸ ಕಾಯ್ದೆಯಲ್ಲಿ ದಾಖಲಾದ ಪ್ರಕರಣಗಳಿಗೆ ಇದು ಒಂದು ರೀತಿ ವಿಶೇಷ ಮೈಲುಗಲ್ಲಾಗಿದೆ‌.

ಲೇಖಕರು 
ಶ್ರೀ ಜೀ ವಿ ರಾಮಮೂರ್ತಿ – ಹಿರಿಯ ವಕೀಲರು,
ಮೈಸೂರು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷರು 
 ಮೈಸೂರು.

 

Copyright © All rights reserved. | Newsphere by AF themes.